ರಬೀಉಲ್ ಆಖರ್ ಶೈಖುನಾ ಶಂಸುಲ್ ಉಲಮಾ (ಖ.ಸಿ) ವಫಾತ್ ಆದ ತಿಂಗಳು

 ರಬೀಉಲ್ ಆಖರ್ ಶೈಖುನಾ ಶಂಸುಲ್ ಉಲಮಾ (ಖ.ಸಿ) ವಫಾತ್ ಆದ ತಿಂಗಳು 



ಪ್ರತೀ ವರ್ಷವೂ ನಡೆಸುತ್ತಾ ಬಂದಿರುವ ಆಂಡ್ ನೇರ್ಚೆಗೆ

,ಆಹ್ವಾನ


ಹನೀಫ್ ದಾರಿಮಿ ಸವಣೂರು ಚೇರ್ಮಾನ್ ದಾರಿಮೀಸ್ ಅಸೋಸಿಯೇಷನ್ ದ ಕ.


ನಾವು ಸುನ್ನಿಗಳೆಂದು ಅಭಿಮಾನ ಪಡಲು ಕಾರಣ "ಶೈಖುನಾ ಶಂಸುಲ್ ಉಲಮಾ" ಎಂದೇಳಿದರೆ ತಪ್ಪಾಗಲಾರದು. 

ತನ್ನ ಪರಿಪೂರ್ಣ ಜೀವನ ಪವಿತ್ರ ಇಸ್ಲಾಮಿಗಾಗಿ ಸಮರ್ಪಿಸಿದ ಶೈಖುನಾರವರ ನೆನಪನ್ನು ಅಲ್ಲಾಹನು ಸ್ಮರಣೀಯಗೊಳಿಸಿದನು. 

ಲೋಕ ಕಂಡ ಮಹೋನ್ನತ ಪಂಡಿತ ಶಿರೋಮಣಿ, ಆಧ್ಯಾತ್ಮಿಕ ನೇತಾರ, 

ಅಹ್ಲ್ ಸುನ್ನತ್ ವಲ್ ಜಮಾಅತ್ ನ ಸಂರಕ್ಷಕ, ಸೂಫಿವರ್ಯ, ಲಕ್ಷಾಂತರ ಉಸ್ತಾದರುಗಳ ಗುರುವರ್ಯ, ಶೈಖುನಾ ಶಂಸುಲ್ ಉಲಮಾ (ಖ.ಸಿ) ನಮ್ಮಿಂದ ಕಣ್ಮರೆಯಾಗಿ 29 ವರ್ಷಗಳು ಕಳೆದರೂ ಸುನ್ನೀ ಜನಕೋಟಿಗಳ ಹೃದಯದಿಂದ ಶೈಖುನಾರ ನೆನಪು ಮಾಸಿಲ್ಲ. ಇದುವೇ ಶೈಖುನಾ ಶಂಸುಲ್ ಉಲಮಾರು ಅಲ್ಲಾಹನ ಇಷ್ಟದಾಸರಾಗಿದ್ದರು ಎನ್ನುವುದಕ್ಕೆ ಬಹುದೊಡ್ಡ ಸಾಕ್ಷ್ಯ‌. 

ಅವರ ಆಗ್ರಹದಂತೆ ಸೋಮವಾರ ಬೆಳಿಗ್ಗಿನ ಸಮಯ ಇಹಲೋಕ ತ್ಯಜಿಸಿದ ಶೈಖುನಾರ ಮೇಲೆ ಯಾಸೀನ್, ಫಾತಿಹಾ ತಹ್ಲೀಲ್ ಸಮರ್ಪಿಸಿ ಪ್ರತ್ಯೇಕ ಪ್ರಾರ್ಥನೆ ಮಾಡೋಣ. ಬನ್ನೀ *ತಾರೀಖು 29/10/24 ಕ್ಕೆ ವಿಟ್ಲ ಕಲ್ಲಡ್ಕ ಮದ್ಯೆ ಕೆಲಿಂಜ ಎಂಬ ಸುಂದರ ಪ್ರದೇಶದ ಜುಮುಅಃ ಮಸ್ಜಿದ್ ಸಭಾಂಗಣಕ್ಕೆ ಬೆಳಿಗ್ಗೆ 10 :00 ರಿಂದ ಮದ್ಯಾಹ್ನ ಲುಹ್ರ್ ನಮಾಜ್ ತನಕ *ಸುನ್ನತ್ ಜಮಾಅತ್ತಿನ ಸಿಂಹ ಅಲಿ ದಾರಿಮಿ ಕುಝಿಮಣ್ಣ* ಅವರಿಂದ ಗಂಬೀರ ಮತ ಪ್ರಭಾಷಣ ನಡೆಯಲಿದೆ.ನಂತರ ಗ್ರಾಂಡ್ ಮೌಲಿದ್ ಕಾರ್ಯಕ್ರಮ ಜರಗಲಿದೆ .

ದಾರಿಮೀಸ್ ಸಂಘಟಿಸುದಾದರೂ ಶೈಖುನಾ ಶಂಸುಲ್ ಉಲಮಾ ರವರ ಪ್ರೀತಿ ಇರುವವರೆಲ್ಲಾ ಬಂದು ಸೇರಬೇಕು ಸಮಸ್ತ ರೇಂಜ್ ನಲ್ಲಿ ರುವ ಎಲ್ಲಾ ಸದರ್ ಉಸ್ತಾದ್ ಮುಅಲ್ಲಿಂಗಳು ಕರ್ನಾಟಕ ದ ಎಲ್ಲಾ ಖತೀಬ್ ಗಳು ಎಲ್ಲಾ ಮುದರ್ರಿಸ್ ರವರುಗಳು, SKSSF SYS SBV ಯವರು ಬರಬೇಕಾಗಿ ವಿನಂತಿ. *ನಾಯಕರುಗಳಿಗೆ ವಿಶೇಷ ಸೀಟಿನ ವ್ಯವಸ್ಥೆ ಮಾಡಲಾಗುವುದು. ರಮಾನೀಸ್ ಫೈಝೀಸ್ ಅಝ್ ಹರೀಸ್ ಅರ್ಷದೀಸ್ ಮದನೀಸ್ ಇನ್ನಿತರ ಎಲ್ಲರಿಗೂ *ಸ್ವಾಗತ ಸುಸ್ವಾಗತ* .

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು