ಕಬಕ ಮೌಲಾನ ಉಸ್ತಾದರ ಆಭಿಮಾನಿ ಈಗ ಮಲೇಷ್ಯಾ ಪ್ರಧಾನಿ
ಹೌದು ಮೌಲಾನಾ ಉಸ್ತಾದ್ ಎಂದೇ ಖ್ಯಾತರಾದ ನಮ್ಮ ಹತ್ತಿರದ ಕಬಕದ ಮೌಲಾನ ಅಬ್ದುಲ್ ರಝಾಕ್ ಉಸ್ತಾದ್ ರ ಅಭಿಮಾನಿ ಈಗ ಮಲೇಷ್ಯಾದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ.
ಅಂತರ್ರಾಷ್ಟ್ರೀಯ ಖ್ಯಾತಿ ಪಡೆದ ಆಧ್ಯಾತ್ಮಿಕ ನಾಯಕರಾಗಿದ್ದರೂ ದೇಶ ವಿದೇಶಗಳ ಲ್ಲಿ ಅಪಾರ ಅಭಿಮಾನಿಗಳಿದ್ದರೂ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯರಂತೆ ಯಾವುದೇ ಹಮ್ಮು ಬಿಮ್ಮಿಲ್ಲದೇ ತಾನೊಬ್ಬ ಆದ್ಯಾತ್ಮಿಕ ನಾಯಕ ಎಂಬ ಸೋಗು ಇಲ್ಲದೇ ತನ್ನ ಆಪ್ತರಲ್ಲಿ ಬಾಯಿ ತಪ್ಪಿಯೂ ಕೂಡಾ ತನ್ನ ಮಹಿಮೆಯನ್ನು ಹೇಳಿಕೊಳ್ಳದೇ ಕಬಕದ ಮನೆಯಲ್ಲಿರುವಾಗ ಅಲ್ಲಿಗೆ ಬೇಟಿ ನೀಡುವರೊಂದಿಗೆ ಎಲ್ಲರಲ್ಲಿ ಒಬ್ಬರಾಗಿ ಸ್ಪಂದಿಸುವ ಗುಣ ಸ್ವಭಾವವನ್ನು ರೂಡಿಸಿ ಕೊಂಡ ಮೌಲಾನ ಉಸ್ತಾದರು ಅವರ ಅಭಿಮಾನಿಯೂ ಆಪ್ತರೂ ಆದ ಅನ್ವರ್ ಇಬ್ರಾಹಿಂ ಎಂಬವರು ಈಗ ಮಲೇಷ್ಯಾ ದೇಶದ ಪ್ರಧಾನಿ ಪಟ್ಟಕ್ಕೇರಿದ್ದಾರೆಂಬುದು ಎಲ್ಲಾರ ಹುಬ್ಬೇರಿಸುವಂತೆ ಮಾಡಿದೆ.
ಹಿಂದೆ ಅವರು ಉಪಪ್ರಧಾನಿಯಾಗಿದ್ದ ವೇಳೆ ಕೆಲ ಸಂಕಷ್ಟವನ್ನು ಎದುರಿಸಿ ಅಧಿಕಾರ ಕಳೆದು ಕೊಂಡಿದ್ದರು.
ಮತ್ತೆ ವಿರೋಧ ಪಕ್ಷದಲ್ಲಿ ಸಕ್ರಿಯರಾಗಿದ್ದರು.
ಆ ಕಷ್ಟದ ಸಂಧರ್ಭ ಅನ್ವರ್ ಇಬ್ರಾಹಿಂ ರವರಿಗೆ ಆಧ್ಯಾತ್ಮಿಕವಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಪರಿಹಾರ ತಿಳಿಸಿದ್ದರು.
ಆ ನಂತರ ಮೌಲಾನ ಉಸ್ತಾದ್ ರ ಆಪ್ತ ವಲಯದಲ್ಲಿ ಅನ್ವರ್ ಇಬ್ರಾಹಿಂ ಗುರುತಿಸಿ ಕೊಂಡರು.
ಅದೇ ಗೌರವಾರ್ಥ ರಝಾಕ್ ಉಸ್ತಾದರ ಮನೆಯಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮ ದಲ್ಲಿ ಅನ್ವರ್ ಇಬ್ರಾಹಿಂ ಕೂಡಾ ಭಾಗಿಯಾಗಿದ್ದರು.
ತನ್ನ ಕಾರ್ಯವು ಮೌಲಾನರ ಸೂಕ್ತ ಸಲಹೆ ದುಹಾ ಮೂಲಕ ಈಡೇರಿದ್ದಕ್ಕಾಗಿ ಮೌಲಾನ ಧಿಕ್ರ್ ಹಲ್ಕಾಗೆ ಹರಕೆ ತೀರಿಸಲು ಕಬಕಕ್ಕೆ ಬಂದಿದ್ದರಲ್ಲದೇ ಮರ್ಹೂಂ ಪುತ್ತೂರು ತಂಙಲ್ ರವರ ಮಕ್ಬರವನ್ನು ಅನ್ವರ್ ಇಬ್ರಾಹಿಂ ಉದ್ಘಾಟಿಸಿದ್ದರು.
ಇತ್ತೀಚೆಗೆ ಅನ್ವರ್ ಇಬ್ರಾಹಿಮರ ಧರ್ಮ ಪತ್ನಿ ಡೆಪ್ಯೂಟಿ ಸಚಿವೆಯಾದ ವೇಳೆ ಅವರ ಮನೆಗೆ ಬೇಟಿ ನೀಡಿ ಶುಭ ಹಾರೈಸಿದ್ದರಲ್ಲದೇ ಪತಿ ಇಬ್ರಾಹಿಂ ರವರು ಶೀಘ್ರದಲ್ಲೇ ಪ್ರಧಾನಿಯಾಗುತ್ತಾರೆಂದು ಭವಿಷ್ಯ ನುಡಿದಿದ್ದರು.
ಮೌಲಾನ ಉಸ್ತಾದರ ಮನೆಯಲ್ಲಿ ನಡೆದ ಅಷ್ಟೂ ಕಾರ್ಯಕ್ರಮದಲ್ಲಿ ಅತಿರಥ ಮಹಾರಥರೇ ಭಾಗವಹಿಸಿದ್ದಾರೆಂಬುದು ವಿಶೇಷ.
ಪಾಣಕ್ಕಾಡ್ ಮರ್ಹೂಂ ಹೈದರಲಿ ಶಿಹಾಬ್ ತಂಙಲ್,ಮರ್ಹುಂ ಸಿ ಎಂ ಉಸ್ತಾದ್,
ಮರ್ಹೂಂ ಪುತ್ತೂರು ತಂಙಲ್,ಮರ್ಹೂಂ ಖಾಸಿಂ ಉಸ್ತಾದ್ ಅದೇ ರೀತಿ ಆಲಿಕುಟ್ಟಿ ಉಸ್ತಾದ್,ತ್ವಾಕಾ ಉಸ್ತಾದ್,ಯು ಎಂ ಉಸ್ತಾದ್, ಅಬ್ದುಸ್ಸಮದ್ ಸಮದಾನಿ,ಪಾಣಕ್ಜಾಡ್ ಮನವ್ವರಲಿ ತಂಙಳ್ ,ಬಶೀರಲಿ ತಂಙಲ್,ರಹ್ಮತುಲ್ಲಾ ಖಾಸಿಮಿ,ಮುಸ್ತಫಾ ಪೈಝಿ,ಆದರ್ಶೇರಿ ಉಸ್ತಾದ್ ಮೊದಲಾದ ಉಲಮಾ ಸಾದಾತ್ ಧುರೀಣರೂ ಶ್ರೀಲಂಕ ಅಶ್ರಪುದ್ದೀನ್ ತಂಗಲ್ ಸಮೇತ ಸಿಂಗಾಪೂರ್,ಬ್ರೂನೆ,ಚೀನಾ,ಸೌದಿಯ ವಿದೇಶೀ ಪ್ರತಿನಿಧಿಗಳೂ ಕಬಕ ಉಸ್ತಾದರ ಧಿಕ್ರ್ ಹಲ್ಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಪುತ್ತೂರಿನ ಖ್ಯಾ ತ ಉದ್ಯಮಿ ಶ್ರೀಧರ್ ಭಟ್ ರಂತಹ ಮುಸ್ಲಿಮೇತರ ನಾಯಕರೂ ಮೌಲಾನ ಉಸ್ತಾದರ ಅಭಿಮಾನಿಗಳಾಗಿದ್ದಾರೆ.
ಮೌಲಾನ ಉಸ್ತಾದರು ಉತ್ತಮ ನಿಷ್ಕಲಂಕ ಗುಣ ಸ್ವಭಾವದವರೂ ಜನರ ಕಷ್ಟಕ್ಕೆ ಸ್ಪಂದಿಸುವ ಉಧಾರ ಶೀಲರೂ ಆಗಿ ಗುರುತಿಸಿ ಕೊಂಡದ್ದೇ ಅವರು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ಎಂದು ಜನರು ಅಭಿಪ್ರಾಯ ಪಡುತ್ತಾರೆ.ಅಲ್ಲಾಹು ಅವರ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೇರಿಸಲಿ.ಆಮೀನ್.