ದೊಲ್ಪಾಡಿಯಲ್ಲಿ ಉದ್ರೇಕಕಾರಿ ಭಾಷಣ ಬಿಗಿದವರನ್ನ ನ್ಯಾಯಾಲಯದ ಸಲಹೆಯಂತೆ ಬಂಧಿಸಬೇಕು
ಎಸ್ ಬಿ ದಾರಿಮಿ ಉಪ್ಪಿನಂಗಡಿ |
ಕಾಣಿಯೂರಿನಲ್ಲಿ ಇತ್ತೀಚೆಗೆ ಬಟ್ಟೆ ವ್ಯಾಪಾರಿಗಳ ಮೇಲೆ ಅಮಾನವೀಯವಾಗಿ ರಾಕ್ಷಸೀಯ ಕೃತ್ಯವೆಸಗಿದ್ದನ್ನು ಖಂಡಿಸಿ ಇತ್ತೀಚೆಗೆ ಪುತ್ತೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳು ಸೇರಿ ಸಂವಿಧಾನ ಬದ್ದವಾಗಿ,ಶಾಂತಿಯುತವಾಗಿ ಯಾವುದೇ ಉದ್ರೇಕವಿಲ್ಲದೇ ನಡೆಸಿದ ಪ್ರತಿಭಟನೆಯನ್ನು ಮುಂದಿಟ್ಟು ಕೆಲವು ಮತೀಯ ಸಂಘಟನೆಗಳು ಮೊನ್ನೆ ದೋಲ್ಪಾಡಿಯಲ್ಲಿ ಪ್ರತಿಭಟನೆಯ ಹೆಸರಲ್ಲಿ ಮುಸ್ಲಿಂ ಸಮಾಜದ ವಿರುದ್ದ ಉದ್ರೇಕಕಾರಿ ಹೇಳಿಕೆ ನೀಡಿ ಮತ್ತೆ ಜಿಲ್ಲೆಯಲ್ಲಿ ಅಶಾಂತಿಯ ವಾತಾರವರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದು ಖಂಡನೀಯವಾಗಿದೆ.
ಸಾಮಾಜಿಕ ಮೀಡಿಯಾಗಳಲ್ಲಿ ಉದ್ರೇಕಕಾರಿ ಭಾಷಣದ ತುಣುಕುಗಳು ಹರಿದಾಡುತ್ತಿದ್ದು ಇದರಿಂದಾಗಿ ಮತ್ತೆ ಜಿಲ್ಲೆಯಲ್ಲಿ ಶಾಂತಿ ಕದಡುವ ಸಂಭವವಿದೆ.
ಮುಖ್ಯವಾಗಿ ಉದ್ರೇಕ ಭಾಷಣಗಳಿಂದಲೇ ಸಾಮಾಜಿಕ ಶಾಂತಿಗೆ ಭಂಗವುಂಟಾದ ಪೂರ್ವಾನುಭವಗಳು ಇರುವಾಗ ಇಂತಹ ಭಾಷಣಗಳಿಗೆ ಪೋಲೀಸರು ಅನುಮತಿ ನೀಡಿದ್ದು ಅಚ್ಚರಿಯೆನಿಸುತ್ತಿದೆ.
ನ್ಯಾಯಲಯವೇ ಇತ್ತೀಚೆಗೆ ಉದ್ರೇಕ ಭಾಷಣಗಾರರ ವಿರುದ್ದ ಕ್ರಮ ಕೈ ಗೊಳ್ಳಬೇಕೆಂದು ನೀಡಿದ ಸಲಹೆಯನ್ನು ಗೌರವಿಸಿ ಪೋಲೀಸರು ಯಾವುದೇ ಮರ್ಜಿಗೆ ಒಳಗಾಗದೇ ತಮ್ಮ ಕರ್ತವ್ಯ ನಿಭಾಯಿಸಿ ಇವರನ್ನು ಬಂಧಿಸಬೇಕಾಗಿದೆ.
ಅದೇ ರೀತಿ ಹಿಂದು ಮುಸ್ಲಿಮ್ ಯುವಕರು ಇಂತಹ ಯಾವುದೇ ಭಾಷಣಗಳಿಗೆ ತಲೆಕೆಡಿಸಿ ಕೊಳ್ಳದೇ ಸಾಮಾಜಿಕ ಮೀಡಿಯಾಗಳಲ್ಲಿ ಅನಗತ್ಯ ಕಮೆಂಟ್ ಗಳು ಹಾಕದೇ ಸಂಯಮದಿಂದ ವರ್ತಿಸಲು ಪ್ರಯತ್ನಿಸ ಬೇಕಾಗಿದೆ. ಕೋಮುವಾದಿಗಳ ಹುನ್ನಾರವನ್ನು ಸೋಲಿಸಲು ಸಂಯಮದ ವರ್ತನೆಯೇ ದಿಟ್ಟ ಉತ್ತರವಾಗಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ನಾಟಕಗಳು ಇನ್ನೂ ಪ್ರದರ್ಶನ ಗೊಳ್ಳಲಿದೆ.
ನಾಡಿನ ಅಭಿವೃದ್ದಿಗೆ ಯಾವುದೇ ಕೆಲಸ ಕಾರ್ಯಗಳು ಮಾಡದೇ ಸೋಲಿನ ಬೀತಿಯನ್ನ ಎದುರಿಸುತ್ತಿರುವ ಪಕ್ಷಗಳಿಗೆ ಜನರನ್ನು ಮತ ಧರ್ಮದ ಹೆಸರಲ್ಲಿ ಭಾವನಾತ್ಮಕವಾಗಿ ಹಿಡಿದಿಟ್ಟು ಕೊಳ್ಲುವ ಹುನ್ನಾರ ಇದರ ಹಿಂದೆ ಅಡಗಿದೆ ಎಂಬುದನ್ನು ಪ್ರಭುದ್ದ ಜನತೆ ಅರ್ಥ ಮಾಡಿ ಕೊಳ್ಳಬೇಕಾಗಿದೆ.
(ಪತ್ರಿಕಾ ಪ್ರಕಟಣೆಗಾಗಿ)