ಪೋಲೀಸರ ಅನನ್ಯ ಸೇವೆಯಿಂದ ನಾವು ಸುರಕ್ಷಿತರಾಗಿದ್ದೇವೆ ಅರ್ಥ ಮಾಡಿಕೊಳ್ಳಿ

      ಪೋಲೀಸರ ಅನನ್ಯ ಸೇವೆಯಿಂದ ನಾವು           ಸುರಕ್ಷಿತರಾಗಿದ್ದೇವೆ ಅರ್ಥ ಮಾಡಿಕೊಳ್ಳಿ
                                ಎಸ್ ಬಿ ದಾರಿಮಿ ಉಪ್ಪಿನಂಗಡಿ


ಪೋಲೀಸರನ್ನ ಬೈಯ್ಯುವವರಿದ್ದಾರೆ.
ಹೌದು ,ಮೊನ್ನೆ ಬೆಳ್ಳಾರೆಯಲ್ಲೂ ಹಾಗೆ ಆಯಿತು.ಕೆಟ್ಟ ಭಾಷೆ ಬಳಸಿ ಬೈದ ವೀಡಿಯೋ ವೈರಲ್ ಆಗಿತ್ತು.
ಹೇಳೋದಾದರೆ ನಿಜವಾಗಿಯೂ ಪೋಲೀಸರ ಧರ್ಮ ಸಂಕಟ ಅವರಿಗೇ ಗೊತ್ತು.
ಅಂದ ಹಾಗೆ ನಾವು ಇವತ್ತು ನಿರ್ಭಯದಿಂದ ಓಡಾಡುವಂತಾಗಲು ಪೋಲೀಸರ ಸೇವೆ ಅನನ್ಯ!
ಅದಕ್ಕೆ ನಾವು ಅವರಿಗೆ ಸೆಲ್ಯೂಟ್ ಹೊಡೆಯಲೇ ಬೇಕು.
ರಾತ್ರಿ ಹಗಲೆನ್ನದೇ ನಿದ್ದೆ ಬಿಟ್ಟು ಕೆಲಸ ಮಾಡುವ ಪೋಲೀಸರಿಗೆ ನಾವು ಪ್ರಾರ್ಥನೆ ಮಾಡಲೇ ಬೇಕು.
ಪೋಲೀಸರಲ್ಲಿ ಕೆಟ್ಟವರು ಇಲ್ಲಾ ಅಂತಲ್ಲ. 
ಕೆಲವರು ಇರಬಹುದು.
ಆದ್ರೆ ಬಹುತೇಕರು ಬಹಳ ಒಳ್ಳೆಯವರು.
ಒಂದು ಉದಾಹರಣೆ ಹೇಳುತ್ತೇನೆ.
ನಿನ್ನೆ ರಾತ್ರಿ ಮಂಗಳೂರಿನ ದೈಜಿವಲ್ಡ್  ಚಾನಲ್ ನಲ್ಲಿ ಪ್ರಸ್ತುತ ಸನ್ನಿವೇಶದ ಬಗ್ಗೆ  ಶಾಂತಿ ಸಂದೇಶ ನೀಡಲು ಹೋಗಿದ್ದೆ.ಕಾರ್ಯಕ್ರಮ ಮುಗಿದಾಗ ಎಂಟುವರೆ ಆಗಿತ್ತು.
ಸ್ಟುಡಿಯೋಗೆ ಬರಲು ಹೇಳಿದ್ದ  ಕಾರಿನ ಚಾಲಕ ಕೈ ಕೊಟ್ಟಿದ್ದ.
ಲಾಲ್ ಬಾಗ್ ನಲ್ಲಿ ಹೋಗಿ ನೋಡಿದಾಗ ಶಿರಾಡಿ ಬಂದ್ ಆಗಿದ್ದರಿಂದ ಆ ಕಡೆ  ಬಸ್ಸು ಇರಲಿಲ್ಲ.ಮೈಸೂರು ಬಸ್ ಹತ್ತಿ  ಬಿ ಸಿ ರೋಡ್ ಇಳಿದೆ.ಅರ್ಧ ಘಂಟೆ ಕಳೆದರೂ ಆಚೆ ಏನೂ ಸಿಗಲಿಲ್ಲ.
ಕೊನೆಗೆ ಜಾರಿಗೆ ಬೈಲು ಶರೀಪ್ ಎಂಬವರು ಕಂಟನೈರ್ ನಲ್ಲಿ ಮಡಿಕೇರಿಗೆ ಹೋಗುವವರಿದ್ದು ನನ್ನನ್ನ ಕಂಡು ನಿಲ್ಲಿಸಿ ಪರಿಸ್ಥಿತಿ ಸರಿ ಇಲ್ಲದ್ದರಿಂದ ಇಲ್ಲಿ ನಿಲ್ಲುವುದು ಸರಿಯಲ್ಲ.ಪುತ್ತೂರಿಗೆ ಹೋಗುವ ಎಂದು ಒತ್ತಾಯ ಪಡಿಸಿ ಹತ್ತಿಸಿದರು.
ಪುತ್ತೂರಿನ ಬೊಳುವಾರು ತನಕ  ಹೋಗಿ  ಅಲ್ಲಿಯೇ ಕೆಮ್ಮಾಯಿಯಲ್ಲಿ ತಂಗಿಯ ಮನೆಯಲ್ಲಿ ತಂಗುವ ಉದ್ದೇಶದಿಂದ ಬಾವ ಬಶೀರ್ ಮುಸ್ಲಿಯಾರನ್ನು ಬರಲು ಹೇಳಿದೆ. ಅಷ್ಟಕ್ಕೆ ರಾತ್ರಿ ಹತ್ತುವರೆ ಘಟೆಯಾಗಿತ್ತು.
ಶರೀಪ್ ಕೂಡಾ ಜೊತೆಗಿದ್ದು ಬಾವನನ್ನು ಕಾಯುತ್ತಾ ಮಾತಾಡುತ್ತಿದ್ದೆವು.
ಅಷ್ಟರಲ್ಲಿ ಅಲ್ಲಿಗೆ ಪೋಲೀಸ್ ವಾಹನವೊಂದು ಬಂದು ನಿಂತಿತು.
ಅವರು ನಮ್ಮನ್ನ ಬಹಳ ಸೌಮ್ಯವಾಗಿ  ವಿಚಾರಿಸಿದರು.
ನಾನು ವಿಷಯ ಹೇಳಿದೆ.ಕೆಮ್ಮಾಯಿಗೆ ಹೋಗುವವನಿದ್ದೇನೆ ಎಂದಾಗ ಅಲ್ಲಿಗೆ ಮುಟ್ಟಿಸ ಬೇಕಾ ಎಂದು ಕೇಳಿದರು.ಇಲ್ಲ ವಾಹನ ಬರುತ್ತದೆ ಎಂದೆ.
ಪರಿಸ್ಥಿತಿ ಸರಿ ಇಲ್ಲ ನನ್ನ ನಂಬ್ರ ಇಟ್ಟು ಕೊಳ್ಳಿ ,ಅಗತ್ಯ ಬಂದರೆ ಪೋನ್ ಮಾಡಿ ಎಂದರು.ನಿಮ್ಮ ಮುಖ  ಪರಿಚಯ ಇದೆಯಲ್ವಾ ಸರ್ ಎಂದು ಕೇಳಿದಾಗ ನಾನು ದಾಸರಿ ಎಸ್ ಐ ಅಂದ್ರು.
ಆಗ ಗೊತ್ತಾಯಿತು ಅವರು ಈ ಹಿಂದೆ ಉಪ್ಪಿನಂಗಡಿಯಲ್ಲಿ ಎಸ್ ಐ  ಆಗಿ ಇದ್ದವರೆಂದು.
ವಿಶೇಷವೇನೆಂದರೆ ಈಗ ಅವರೇ ಖುದ್ದು ಕಾಲ್ ಮಾಡಿ ಆರಾಮವಾಗಿ ಮನೆ ತಲುಪಿದ್ರಾ? ಎಂದು ವಿಚಾರಿಸಿದ್ರು.
ಇಂತಹ ಮಾನವೀಯತೆ ಇರುವ  ಅಧಿಕಾರಿಗಳು ಇರುವ ತನಕ ನಮ್ಮ ದೇಶ ಖಂಡಿತ ಸುರಕ್ಷಿತ.ಇಂತವರ ಸಂಖ್ಯೆ ಹೆಚ್ಚು ಹೆಚ್ಚು ಉಂಟಾಗಲಿ.

🟥🟥🟥🟥🟥🟥🟥🟥🟥🟥🟥🟥🟥🟥🟥🟥🟥🟥🟥🟥


This is article by SB DARIMI 

JOIN WHAT'S APP GROUP AND GET JOB AND NEWS UPDATE DAILY 
WEBSITE NAME www.hotnewsahs.com 
Copyright ©️

SHARE MAXIMUM THAT YOU CAN 

You can send article news to us 
Contact with whatsapp 
Don't call
Mobile number given below 
7349572737

1 ಕಾಮೆಂಟ್‌ಗಳು

ನವೀನ ಹಳೆಯದು