ಮದರಸಕ್ಕೆ ಬರುವ ನೊಂದ ಪುಟಾಣಿ ಮಗು 😟ಸಾಲತ್ತೂರು ಗ್ರಾಮ ಒಳಪಟ್ಟ ಪಾಲ್ತಾಜೆ ಇಂದ ನಾಟೆಕಲ್ಲಿಗೆ ಸೇರುವ ದಾರಿ
ಸಾಲತ್ತೂರು ಗ್ರಾಮ ಒಳಪಟ್ಟ ಪಾಲ್ತಾಜೆ ಇಂದ ನಾಟೆಕಲ್ಲಿಗೆ ಸೇರುವ ದಾರಿ
ಸಾಲತ್ತೂರು ಗ್ರಾಮ ಒಳಪಟ್ಟ ಪಾಲ್ತಾಜೆ ಇಂದ ನಾಟೆಕಲ್ಲಿಗೆ ಸೇರುವ ದಾರಿ ಕಳೆದ ಎಷ್ಟು ವರ್ಷಗಳಿಂದ ಮದರಸ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ . ವಿದ್ಯಾರ್ಥಿಗಳು ಮಾತ್ರವಲ್ಲ ಅಲ್ಲಿಯ ಜನರು ಅತ್ತೆ ಇತ್ತ ಸಂಚರಿಸುವ ಒಂದು ದಾರಿ.
ಆ ದಾರಿಯಲ್ಲಿ ಅತ್ತ ಇತ್ತ ಸಂಚರಿಸಲು ಕೂಡ ಸಾಧ್ಯವಾಗುತ್ತಿಲ್ಲ.
ಮಳೆ ನೀರು ಅಲ್ಲಿ ನಿಂತು ಕೆಸರು ತುಂಬಿ ಕಾಲು ಹಾಕಲು ಕೂಡ ಆಗುತ್ತಿಲ್ಲ.
ಬೆಳ್ಳಂಬೆಳಗ್ಗೆ ಮದರಸಕ್ಕೆ ಬರುವ ಪುಟಾಣಿ ಮಗು ಒಂದು ಲೇಟಾಗಿ ಬಂದ ಕಾರಣ ಕೇಳಿದೆ ಯಾಕೆ ಇಷ್ಟು ಲೇಟ್ ಆ ಮಗು ನನ್ನ ಬಳಿ ಬಂದು ಹೇಳಿತು "ಉಸ್ತಾದರೆ ಬರುವಾಗ ಅಲ್ಲಿ ಜಾರಿ ಬಿದ್ದೆ ಅಲ್ಲಿ ನಡೆಯಲು ಆಗುತ್ತಿಲ್ಲ" ಅವತ್ತೇ ರಾತ್ರಿ ಮದರಸಕ್ಕೆ ಬರುವ ವಿದ್ಯಾರ್ಥಿಗಳಲ್ಲೂ ಕೇಳಿದೆ ಅವರು ಕೂಡ ಅದನ್ನೇ ಹೇಳಿದರು...
ನಾನು ಕೂಡ ಆ ದಾರಿಯನ್ನು ನೋಡಲು ಹೋದೆ ಕಂಡು ನನಗೂ ಕೂಡ ಈ ಕಡೆಯಿಂದ ಆ ಕಡೆ ತಲುಪಲು ತುಂಬಾನೇ ಕಷ್ಟವಾಯಿತು.
ಈ ವಿಚಾರವನ್ನು ಊರಿನ ಜನರ ಬಳಿ ಕೇಳಿದೆ, ಅವರ ಉತ್ತರ ಹೀಗಾಗಿತ್ತು. ಉಸ್ತಾದರೇ... ತುಂಬಾ ಬಾರಿ ನಾವು ಅದಕ್ಕೆ ಕಲ್ಲು ಹಾಕಿ ನಮ್ಮಿಂದ ಆಗುವಷ್ಟು ನಾವು ಸರಿಪಡಿಸುತ್ತಿದ್ದೇವೆ ಅದು ಕೆಲವು ದಿವಸ ನಂತರ ಅದೇ ರೀತಿ ಆಗುತ್ತೆ.. ಮಾತ್ರವಲ್ಲ ಗ್ರಾಮ ಪಂಚಾಯಿತಿಗೆ ಅರ್ಜಿ ಕೂಡ ನೀಡಿದ್ದೇವೆ ಅದನ್ನು ಅವರು ಪರಿಗಣಿಸುತ್ತಿಲ್ಲ ತುಂಬಾ ವರ್ಷಗಳು ಆಯಿತು.
ಯಾವುದೇ ರಾಜಕಾರಣಿಗಳ ಕಡೆಯೋ ಪಕ್ಷದ ಕಡೆಯೋ ಅಲ್ಲ ಈ ಬರಹ ಆ ಪುಟಾಣಿ ಮಕ್ಕಳಿಗಾಗಿ
🤝 ಈ ಬರಹ ತಲುಪಬೇಕಾದವರಿಗೆ ತಲುಪಿಸಿ ನಿಮ್ಮಿಂದ ಸಾಧ್ಯವಾದಷ್ಟು ಬೇಗನೆ ಈ ವಿಚಾರ ಪರಿಗಣಿಸುವ ವರೆಗೂ ಶೇರ್ ಮಾಡಿ ನಮ್ಮೊಂದಿಗೆ ಕೈಜೋಡಿಸಿ