ಯಾವ ಉಚಿತ ನು ಬೇಡ ಕಾನೂನು ಕೈಗೆತ್ತಿಕೊಂಡಾಗ ಡಿಪಾರ್ಟ್ ಮೆಂಟ್ ಸರಿಯಾಗಿ ಕೆಲಸ ನಿರ್ವಹಿಸುವ ಮೂಲಕ ರಾಜ್ಯದ ಶಾಂತಿ ಕಾಪಾಡಿದರೆ ಅದೇ ಸಾಕು

 ಯಾವ ಉಚಿತ ನು ಬೇಡ ಕಾನೂನು ಕೈಗೆತ್ತಿಕೊಂಡಾಗ ಡಿಪಾರ್ಟ್ ಮೆಂಟ್ ಸರಿಯಾಗಿ ಕೆಲಸ ನಿರ್ವಹಿಸುವ ಮೂಲಕ ರಾಜ್ಯದ ಶಾಂತಿ ಕಾಪಾಡಿದರೆ ಅದೇ ಸಾಕು



ಬಕ್ರೀದ್ ಬರ್ತಾ ಇದೆ ಕಾನೂನು ಕೈಗೆತ್ತಿಕೊಂಡಾಗ ಸುಮ್ಮನೆ ಇರಲ್ಲ ಎಂದು ಪ್ರೀಯಾಂಕ ಖರ್ಗೆ ಖಡಕ್ ಮಾತು ನೋಡಿ ಸಮಾಧಾನವಾಯಿತು. 


ಈ ದೇಶದಲ್ಲಿ ಕೆಲವರಿಗೆ ಇದೊಂದು  ಜೀವನ ಶೈಲಿಯಾಗಿ ಬಿಟ್ಟಿದೆ. ದಾರ್ಮಿಕ ಭಾವನೆ ಕೆರಳಿಸುವ, ಅದರಲ್ಲಿ ಗಲಾಟೆ ಮಾಡುವ ಆ ಮೂಲಕ ಧರ್ಮ ರಕ್ಷಕ ಎಂಬಂತೆ ಜನರನ್ನು ನಂಬಿಸುವ........ ಇತ್ಯಾದಿ ಇತ್ಯಾದಿ ಇಲ್ಲಿ ಸರಕಾರ ,ಪೋಲೀಸು, ಸಾರ್ವಜನಿಕರು ಎಲ್ಲ ಗೊಂದಲದಲ್ಲಿ ಸಿಲುಕಿ ಒದ್ದಾಡುವ ಪರಿಸ್ಥಿತಿ ಉಂಟಾಗುತ್ತದೆ. ಇದೆಲ್ಲವನ್ನೂ ನಿಯಂತ್ರಣ ಮಾಡಬೇಕಾದ ಅಧಿಕಾರಿಗಳಲ್ಲಿ ಕೂಡ ಹಲವರು ಮೌನಿಗಳು ಇನ್ನು ಕೆಲವರು ಸಾಚಾಗಳು (ಅಂದರೆ ಯಾವುದಕ್ಕೂ ಇಲ್ಲದವನಂತೆ ನಟನೆ ಮಾಡುವುದು. ಕೆಲವು ರಾಜಕೀಯ ನಾಯಕರು ಪರಸ್ಪರ ಹೇಳಿಕೆಗಳನ್ನು ನೀಡಿ ದೊಡ್ಡ ಜನ ಆಗುವುದು. ಇವುಗಳು ಈ ದೇಶದಲ್ಲಿ ಮುಂದುವರಿಯಬಾರದು 


ಭಾರತ ವೈವಿಧ್ಯತೆಗಳ ಬೀಡು ವಿವಿಧ ಬಾಷೆ- ವೇಷ ,ಧರ್ಮಗಳ ಪ್ರದೇಶ .ಇಲ್ಲಿ ಯಾರು ಎಷ್ಟೇ ಲಾಗ ಹಾಕಿದರೂ ಏನೂ ಆಗಲ್ಲ .ಇದು ಜಾತ್ಯಾತೀತ ರಾಷ್ಟ್ರ. ದೇಶ ಪ್ರೇಮ ಬಿಗಿಯಾಗಿ ಹಿಡಿದು ಒಂದಾಗಿ ಬಾಳಿ ಬದುಕೋಣ !ಅದಕ್ಕೆ ಎಲ್ಲ ಪಕ್ಷ, ಜಾತಿ ಧರ್ಮದವರುಕೈಜೋಡಿಸೋಣ ಜೈ ಹಿಂದ್ ಜೈ ಕರ್ನಾಟಕ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು