ದಾರಿಮಿ ಶಬೇ ಮಿಹ್ರಾಜ್ ಮಜ್ಲಿಸ್ -2023
ಉದ್ದೇಶ ಮತ್ತು ಗುರಿ
ಗತಕಾಲ ಇಸ್ಲಾಮಿನ ಚೈತನ್ಯದ ಪ್ರಭೆಯನ್ನು ಹರಡಿದ ಪ್ರಸಿದ್ಧ ಕೇಂದ್ರಾಗಿದೆ ಕೇರಳದ ಕುಡಂಗಳ್ಳೂರು.
ಆ ಮೂಲಕ ಮಾಲಿಕುದ್ದೀನಾರ್ (ರ) ಮತ್ತು ಸಂಗಡಿಗರು ನಡೆಸಿದ ಪ್ರಯಾಣವು ಬಾರಕೂರ್ ತನಕ ತಲುಪುತ್ತದೆ. ಈ ಪ್ರಯಾಣವು ಸುಮಾರು ಹತ್ತರಷ್ಟು ಮಸೀದಿಗಳನ್ನು ಸಮುದಾಯಕ್ಕೆ ಸಮರ್ಪಿಸುತ್ತದೆ.
ಮಂಗಳೂರಿನ ಕೇಂದ್ರ ಝೀನತ್ ಭಕ್ಷ್ ಮಸೀದಿ, ಕಾಸರಗೋಡಿನ ಮಾಲಿಕುದ್ದೀನಾರ್ ಮಸೀದಿ, ಇಂದಿಗೂ ಧರ್ಮ ಭೋದಕರ ಹೆಜ್ಜೆ ಗುರುತಿನ ಸಾಕ್ಷಿಯಾಗಿ ನೆಲೆ ನಿಂತಿದೆ.
ಪ್ರತಿಷ್ಠಿತ ಪೊನ್ನಾನಿಯ ಮಸೀದಿಯು ಇಸ್ಲಾಮಿನ ನವೋದಯದ ಚರಿತ್ರೆಯನ್ನು ಸಾರುತ್ತದೆ. ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧವಾದ ಆತ್ಮೀಯ ಕೇಂದ್ರ ಉಳ್ಳಾಲ ಕೂಡ ಸಯ್ಯಿದ್ ಮಹಮ್ಮದ್ ಶರೀಫುಲ್ ಮದನೀ ತಂಗಳರಿಂದ ಧನ್ಯಗೊಂಡಿದೆ.
ಮಹಾನುಭಾವರಾದ ಸಂತಪುರುಷರ ಸಾನಿಧ್ಯದಿಂದ ಇಸ್ಲಾಮಿಗೆ ಭವ್ಯವಾದ ಅಡಿಪಾಯ ಒದಗಿದೆ. ಈ ಪರಂಪರೆಯನ್ನು ಕಾಪಾಡುವ ನೂರಾರು ದೀನೀ ಸಂಸ್ಥೆಗಳು, ವಿದ್ಯಾಲಯಗಳು ಕಾರ್ಯಾಚರಿಸುತ್ತಿದೆ.* *ಇವೆಲ್ಲದರಲ್ಲಿ ಉನ್ನತ ಶ್ರೇಣಿಯಲ್ಲಿ ನಿಲ್ಲುವ ಜಾಮಿಯಾ ದಾರುಸ್ಸಲಾಮ್ ನಂದಿ ಅರಬಿಕ್ ಕಾಲೇಜು ಕಲ್ಲಿಕೋಟೆಯ ಸಮೀಪದ ಕಡಲತಡಿಯ ಮನೋಹರವಾದ ಪ್ರಕೃತಿಯ ಸೊಬಗಿನಲ್ಲಿ ಬೆಳೆದು ನಿಂತಿದೆ.
ಮರ್ ಹೂಮ್ ನಂದಿಯಿಲ್ ಮುಸ್ಲಿಯಾರ್ ಮೂಲಕ ಆರಂಭಗೊಂಡ ಸಂಸ್ಥೆಯು ವಿಶ್ವವಿಖ್ಯಾತ ವಿದ್ವಾಂಸ ಪ್ರಭೆ ಶಂಸುಲ್ ಉಲಮರ ಮೂಲಕ ಅದ್ಭುತವಾಗಿ ಬೆಳಗಿದೆ.
ಈ ಸಂಸ್ಥೆ ಯ ಸಂತತಿಗಳಾದ ದಾರಿಮಿಗಳು ಜಲ್ಲೆಯ ನೂರಾರು ಮಹಲ್ಲಾಗಳಲ್ಲಿ ದೀನೀ ಸೇವೆ ರಲ್ಲಿ ನಿರತರಾಗಿದ್ದೇವೆ. ಹತ್ತು ಹಲವು ವಿಷಯಗಳಲ್ಲಿ ಮಿಂಚುತ್ತಿರುವ ದಾರಿಮಿ ಗಳನ್ನು ನೀವು ನೋಡುತ್ತಿದ್ದೀರಿ.
ಕರ್ನಾಟಕ ರಾಜ್ಯ ಧಾರಿಮಿಗಳ ಒಕ್ಕೂಟವು ಇದೀಗ ಜಾಮಿಯಾ ದಾರುಸ್ಸಲಾಮ್ ನ ಪ್ರಚಾರಾರ್ಥ ಮಹಾಸಮ್ಮೇಳನವನ್ನು ಹಮ್ಮಿಕೊಂಡಿದ್ದೇವೆ.
ಅದರ 4 7ನೇ ವಾರ್ಷಿಕ ಮತ್ತು 15ನೇ ಘಟಿಕೋತ್ಸವ ಸಮ್ಮೇಳನವು ಇದೇ ಬರುವ ಫೆ 24, 25, 26, ದಿನಗಳಲ್ಲಿ ನಡೆಯಲಿದೆ.
ದಾರಿಮೀ ಶಭೇ ಮೆಹರಾಜ್ ಮಜ್ಲೀಸ್-2023 ದಿನಾಂಕ 18 ರಂದು ಶನಿವಾರ ಸಂಜೆ ಜನಪ್ರಿಯ ಗಾರ್ಡನ್ನಲ್ಲಿ ನಡೆಯಲಿದೆ.
ಸದಾತುಗಳಿಂದ ಉಲಮಾ ನೇತಾರರಿಂದ ಮಜ್ಜಿಲಿಸ್ ಧನ್ಯಗೊಳ್ಳಲಿದೆ.
ದಾರಿಮಿ ಉಲಮಾ ಒಕ್ಕೂಟವು ಹತ್ತು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಸಾಮಾಜಿಕ ಕಳಕಳಿಯೊಂದಿಗೆ ಹತ್ತು ಹಲವು ಸಂಕಷ್ಟದ ಸಮಸ್ಯೆಗಳಿಗೆ ನೆರವಾಗಿದೆ. ಆರಂಭದಲ್ಲಿ ಪೆರ್ನೆಯಲ್ಲಿ ನಡೆದ ಅನಿಲ ಟ್ಯಾಂಕರ್ ಮಹಾ ದುರಂತ ಸ್ಫೋಟದಲ್ಲಿ ಜೀವ ಕಳಕೊಂಡ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಹಾಯ ಹಸ್ತ ನೀಡಿದೆ.
ತೀರಾ ಸಂಕಷ್ಟದಲ್ಲಿದ್ದ ಎರಡು ಧಾರಿಮಿ ಉಸ್ತಾದ್ ಗಳಿಗೆ ಚಿಕಿತ್ಸೆಗಾಗಿ ತಲಾ 50 ಸಾವಿರದಂತೆ ಒಂದು ಲಕ್ಷ ರೂಪಾಯಿಗಳನ್ನು ನೀಡಿದೆ. ಅಪಘಾತ ಒಂದರಲ್ಲಿ ಸಂಕಷ್ಟಕ್ಕೆ ಒಳಗಾದ ಒಂದು ಉಸ್ತಾದ್ ಕುಟುಂಬಕ್ಕೆ ರೂ.30 ಸಾವಿರ ಸಹಕಾರ ನೀಡಿದೆ. ಕೊರೋನ ಸಂದರ್ಭದಲ್ಲಿ ನೂರರಷ್ಟು ಅಧ್ಯಾಪಕರಿಗೆ 2 ಲಕ್ಷ ರೂಪಾಯಿ ಸಹಾಯಧನ ನೀಡಿದೆ. ಮಂಗಳೂರಿನ ಗೋಲಿಬಾರಿನಲ್ಲಿ ಜೀವ ಕಳಕೊಂಡ ಕುಟುಂಬಗಳಿಗೆ ಸಹಾಯ ಹಸ್ತ ನೀಡಿದೆ. ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉನ್ನತ ಶ್ರೇಣಿಯಲ್ಲಿ ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳಿಗೆ 13 ಸಾವಿರ ಪ್ರೋತ್ಸಾಹ ಧನ ನೀಡಿದೆ. ಹೃದಯ ಸಂಬಂಧಿತ ಕಾಯಿಲೆಯ ಚಿಕಿತ್ಸೆಗೆ 20 ಸಾವಿರ ವಿತರಿಸಿದೆ. ಒಂದು ಬಡ ಯತೀಮ್ ಕುಟುಂಬದ ಮದುವೆಗಾಗಿ 90 ಸಾವಿರ ನೀಡಿದೆ. ಕೊರೊನ ಸಂದರ್ಭದಲ್ಲಿ ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಸಮಿತಿಗೆ ಸುಮಾರು 50 ಸಾವಿರದ ಪಿಪಿ ಕಿಟ್ಟನ್ನು ನೀಡಿದೆ .ಬೇರೆ ಮದುವೆ ಕಾರ್ಯಗಳಿಗೂ ಸಹಾಯ ನೀಡಿದೆ. ಇತ್ತೀಚೆಗೆ ತೀರಾ ಕಾಯಿಲೆಗೆ ಒಳಗಾದ ದಾರಿಮಿಯವರಿಗೆ 1 ಲಕ್ಷ ವಿತರಿಸಿದೆ.
ಮುಂದಿನ ಪ್ರತಿ ಮೊಹಲ್ಲಾಗಳಲ್ಲಿ ಧಾರ್ಮಿಕ ಜಾಗೃತಿಯ ಹೊಸ ಕಲ್ಪನೆಯ ಅನುಷ್ಠಾನ ಪ್ರಯೋಗಗಳನ್ನು ಹಲವು ರೀತಿಯಲ್ಲಿ ಜಾರಿಗೆ ತರಲು ಉದ್ದೇಶಿಸಿದೆ. ಉಲಮಾ ಕ್ಷೇಮ ಪದ್ಧತಿಯನ್ನು ಸುವ್ಯವಸ್ಥಿತವಾಗಿ ಅಳವಡಿಸಿಕೊಳ್ಳುವುದು, ಆರೋಗ್ಯ ಶಿಕ್ಷಣ ಮತ್ತು ಇನ್ನಿತರ ಸಮಸ್ಯೆಗಳಿಗೆ ನೆರವಾಗುವುದು ನಮ್ಮ ಗುರಿಯಾಗಿದೆ. ಉನ್ನತ ಶಿಕ್ಷಣ ತರಬೇತಿ ಸೆಂಟರ್ ಸ್ಥಾಪಿಸುವುದು, ಬೃಹತ್ ಲೈಬ್ರರಿಯಾ ವ್ಯವಸ್ಥೆ ಮಾಡುವುದು, ಇಸ್ಲಾಮಿಕ್ ರಿಸರ್ಚ್ ಸೆಂಟರ್ ಅನ್ನು ಸ್ಥಾಪನೆ ಮಾಡುವುದು, ಅಂಗವಿಕಲ ಬುದ್ಧಿಮಾಂದ್ಯ ಹಾಗೂ ವೃದ್ಧರಿಗೆ ಆಸರೆ ಕೇಂದ್ರವನ್ನು ಸ್ಥಾಪಿಸುವುದು, ಭಾರತೀಯ ರಾಷ್ಟ್ರೀಯ ಸೌಹಾರ್ದ ಸಂಸ್ಕೃತಿಯ ಬೃಹತ್ ಕೇಂದ್ರದ ಸ್ಥಾಪನೆ ಮುಂತಾದ ಕಾರ್ಯಗಳು ನಮ್ಮ ಧ್ಯೇಯವಾಗಿದೆ. ಸುಶಿಕ್ಷಿತ ಅಮಲು ಮುಕ್ತ ಶಾಂತಿ,ನೆಮ್ಮದಿ, ಸೌಹಾರ್ದ ಸಮಾಜದ ಕಲ್ಪನೆಯಾಗಿದೆ ನಮ್ಮದು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಶಕ್ತಿ ತುಂಬುವ ಪ್ರಾರ್ಥನೆಯ ಮಜ್ಲಿಸ್ ಆಗಿದೆ ದಾರಿಮಿ ಸಭೆ ಮೆಹರಾಜ್ 2023
ಈ ಕಾರ್ಯಕ್ರಮಕ್ಕೆ ತನು ಮನ ಧನ ಮೂಲಕ ಸಹಕಾರ ನೀಡುವ ಹಾಗೆ ಈ ಕಾರ್ಯಕ್ರಮಕ್ಕೆ ಭಾಗವಹಿಸುವ ಸಹೋದರ ಸಹೋದರಿಯರಿಗೆ ಸೌಖ್ಯ ಸಮೃದ್ಧಿ ಸೌಭಾಗ್ಯ ನೆಮ್ಮದಿಯ ಬದುಕು ಅಲ್ಲಾಹನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು
ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟ.
@@@@@@@@@@@@@@@@@@@@@@@@@@
Representative image