SKSSF ಜಿಲ್ಲಾ ಕಲೋತ್ಸವದ ಪೂರ್ವಭಾವಿ ಸಭೆRepresentative image
SKSSF ಸರ್ಗಲಯ ಜಿಲ್ಲಾ ಸಮಿತಿ ನಡೆಸುವ ಜಿಲ್ಲಾ ಕಲೋತ್ಸವ-2k22 ಇದರ ಪೂರ್ವಭಾವಿ ಸಭೆಯು SKSSF ಉಳ್ಳಾಲ ಶಾಖಾಧ್ಯಕ್ಷರಾದ ಅಶ್ರಫ್ ಮುಕ್ಕಚ್ಚೇರಿ ಅವರ ಅಧ್ಯಕ್ಷತೆಯಲ್ಲಿ SKSSF ಕಛೇರಿ ಉಳ್ಳಾಲದಲ್ಲಿ ನಡೆಯಿತು.
SKSSF ತ್ವಲಬಾ ವಿಂಗ್ ದ.ಕ ವೆಸ್ಟ್ ಚೇರ್ ಮ್ಯಾನ್ ತುಫೈಲ್ ಅಡ್ಯಾರ್ ಕಣ್ಣೂರು ಪ್ರಾರ್ಥನೆ ನೆರವೇರಿಸಿದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಲೋತ್ಸವ ಉಸ್ತುವಾರಿ ಜನಾಬ್ ಆಸೀಫ್ ಉಳ್ಳಾಲ ಅವರು ಕಾರ್ಯಕ್ರಮದ ಸಿದ್ಧತೆಯ ರೂಪುರೇಷೆ ತಯಾರಿ ಮಾಹಿತಿಯನ್ನು ನೀಡಿದರು.
ಸಭೆಯಲ್ಲಿ ಸಯ್ಯಿದ್ ಹಾಶಿಂ ತಂಙಳ್ ಉಳ್ಳಾಲ , ಮಂಗಳೂರು ವಲಯಾಧ್ಯಕ್ಷರಾದ ಎ.ಕೆ ಖಾದರ್ ಕಣ್ಣೂರು , ಸಹಚಾರಿ ದೇರಳಕಟ್ಟೆ ವಲಯ ಚೇರ್ ಮ್ಯಾನ್ ಹಾಮದ್ ಅಲ್ತಾಫ್ , ಸರ್ಗಲಯ ರಾಜ್ಯ ಕನ್ವೀನರ್ ನಿಸಾರ್ ಬೆಂಗ್ರೆ , ದೇರಳಕಟ್ಟೆ ವಲಯ ಕಾರ್ಯಕಾರಿ ಸದಸ್ಯರಾದ ಬಶೀರ್ ಉಳ್ಳಾಲ ಮಾತನಾಡಿದರು.
ಸಭೆಯಲ್ಲಿ SKSSF ವಿಖಾಯ ದೇರಳಕಟ್ಟೆ ವಲಯ ಜನರಲ್ ಕನ್ವೀನರ್ ಹನೀಫ್ ಕುಂಜತ್ತೂರು , ತ್ವಲಬಾ ವಿಂಗ್ ಜಿಲ್ಲಾ ಕನ್ವೀನರ್ ಸಫ್ವಾನ್ ಕೊಡುಂಗೈ , ಸಹಚಾರಿ ದೇರಳಕಟ್ಟೆ ವಲಯ ಕನ್ವೀನರ್ ಲತೀಫ್ ಫಜೀರು , ತ್ವಲಬಾ ವಿಂಗ್ ಮುಖಂಡರಾದ ಝಫರ್ ಉಳ್ಳಾಲ , ಜಲಾಲ್ ಅಡ್ಯಾರು ಕಣ್ಣೂರು , ಪಿ.ನೌಶಾದ್ ಅರಸ್ತಾನ , ಶಬೀರ್ ಉಳ್ಳಾಲ , ಮುಕ್ಕಚ್ಚೇರಿ SKSSF ಮುಖಂಡರು ಉಪಸ್ಥಿತರಿದ್ದರು.
ನೌಶಾದ್ ಮಲಾರ್ ಸ್ವಾಗತಿಸಿ , ಉವೈಸ್ ಮದನಿ ಅಲ್-ಅಝ್ಹರಿ ವಂದಿಸಿದರು.
skssf_kalotsava_2k22_ullala