ಕಾಣಿಯೂರು ಪ್ರಕರಣದಲ್ಲಿ ಭಾಗಿಯಾದ ರಾಕ್ಷಸರ ಬಂದನ ಶ್ಲಾಘನೀಯ.

 ಕಾಣಿಯೂರು ಪ್ರಕರಣದಲ್ಲಿ ಭಾಗಿಯಾದ ರಾಕ್ಷಸರ ಬಂದನ ಶ್ಲಾಘನೀಯ.
ಎಸ್ ಬಿ ದಾರಿಮಿ

ಕಾಣಿಯೂರಿನಲ್ಲಿ ಬಟ್ಟೆ ವ್ಯಾಪಾರಿಗಳ ಮೇಲೆ ಧರ್ಮದ ಗುತ್ತಿಗೆ ಪಡಕೊಂಡ ಕೆಲ ಪುಂಡು ಪೋಕರಿಗಳ ರಾಕ್ಷಸೀಯ ವರ್ತನೆಯು ಇಂದಿನ ಸೋಶಿಯಲ್ ಮೀಡಿಯಾದ ಪ್ರಭಾವದಿಂದಾಗಿ ದೇಶದ ಮಾನವೇ ಹಾರಾಜಾಗಲು ಕಾರಣವಾಗಿದ್ದು ಇವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಬೇಕಾಗಿದೆ.ಈಗಾಗಲೇ ಇವರನ್ನು ಬಂದಿಸಿದ ಪೋಲೀಸ್ ಕ್ರಮ ಶ್ಲಾಘನೀಯವಾಗಿದೆ.

ಇಂತವರು ಭಾರತೀಯ ಸಂಸ್ಕೃತಿಗೆ ಮತ್ತು ಹಿಂದು ಧರ್ಮಕ್ಕೆ ಕಲಂಕವಾಗಿದ್ದಾರೆ.ರಾಜಕೀಯ ಪ್ರಭಾವ ಬಳಸಿ ಇವರು ಹೊರಬಂದರೆ ಅದು ಮತ್ತೆ ಇಂತಹ ರಾಕ್ಷಸೀಯ ವರ್ತನೆ ಮರುಕಳಿಸಲು ಎಡೆಮಾಡಿ ಕೊಡುತ್ತದೆ.ಹಾಗೇ ಆದರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ. ನಾಡಿನ ಶಾಂತಿ ಬಯಸುವ ಎಲ್ಲಾ ಹಿಂದು ಮುಸ್ಲಿಮ್ ನಾಗರಿಕರ ನೈತಿಕ ಬೆಂಬಲ ಪೋಲೀಸರಿಗೆ ಇದ್ದು ಯಾವುದೇ ರಾಜಕೀಯ ಪುಡಾರಿಗಳ ಲಾಬಿಗೆ ಮಣಿಯದೇ ಕಾನೂನು ಪ್ರಕಾರ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದೇ ಸಾರ್ವಜನಿಕರ ಒಕ್ಕೊರಲಿನ ಅಭಿಪ್ರಾಯವಾಗಿದೆ.ಅದೇ ವೇಳೆ ದೌರ್ಜನ್ಯಕ್ಕೆ ಒಳಗಾದವರಿಂದ ತಪ್ಪಾಗಿದ್ದರೆ ಅವರ ಮೇಲೂ ಕಾನೂನು ಕ್ರಮ ಕೈ ಗೊಳ್ಳಲು ಹಿಂಜರಿಯಬಾರದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು