ಇಂದು ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಈ ವಿಷಯ ನಿಮ್ಮ ಗಮನದಲ್ಲಿರಲಿ
ಇಂದಿನ ಪ್ರತಿಭಟನೆ ಬರುವವರು ಗಮನಕ್ಕೆ
⚫ ವಾಹನದಲ್ಲಿ ಬರುವಾಗ ಯಾವುದೇ ಉದ್ರೇಕ ಘೋಷಣೆ ಕೂಗಬಾರದು.
⚫ ಪೋಲಿಸರ ವಿರುದ್ಧ ಮತ್ತು ಯಾವುದೇ ಸಂಘಟನೆಗಳ ವಿರುದ್ಧ ಬರಹ ಘೋಷಣೆಗೆ ಅವಕಾಶ ವಿಲ್ಲ.
⚫ ನಮ್ಮದು ನ್ಯಾಯಕ್ಕಾಗಿ ಹೋರಾಟವೇ ಹೊರತು ಉದ್ರೇಕಗೊಳಿಸುವುದಲ್ಲ.
⚫ ಇಬ್ಬರು ಉಲಮಾಗಳು ಮುಖ್ಯ ಭಾಷಣ ಮಾಡಲಿದ್ದಾರೆ. ಅವರ ಭಾಷಣವನ್ನು ಶಾಂತಚಿತ್ತದಿಂದ ಆಳಿಸಿ ಅತ್ಯಂತ ಶಾಂತಿಯನ್ನು ಪಾಲಿಸಬೇಕಾಗಿದೆ.
⚫ ಉದ್ರೇಕ ಘೋಷಣೆ ಮತ್ತು ಪೋಸ್ಟರ್ ಪ್ರದರ್ಶಿಸಿ ಪೋಲೀಸರು ಕಾನೂನು ಕ್ರಮ ಕೈ ಗೊಂಡರೆ ಅದಕ್ಕೆ ಒಕ್ಕೂಟ ಜವಾಬ್ದಾರಿಯಲ್ಲ.
⚫ ಇದು ಯಾವುದೇ ರಾಜಕೀಯ ಪಕ್ಷ ಮತ್ತು ಸಂಘಟನೆ ನಡೆಸುವ ಪ್ರತಿಭಟನೆಯಲ್ಲ.ಹಾಗಾಗಿ ಯಾವುದೇ ಸಂಘಟನೆ ಮತ್ತು ಪಕ್ಷದ ನಾಯಕರನ್ನು ವೈಭವೀಕರಿಸುವ ಯಾವುದೇ ಘೋಷಣೆಗೆ ಅವಕಾಶ ಇಲ್ಲ.
ಮುಸ್ಲಿಂ ಐಕ್ಯತಾ ವೇದಿಕೆ,ಸುರತ್ಕಲ್
ಫಾಝಿಲ್ ಮತ್ತು ಮಸೂದ್ ರವರ ಕೊಲೆಯಲ್ಲಿ ಬಿಜೆಪಿ ಸರಕಾರ ತೋರಿದ ತಾರತಮ್ಯ ನೀತಿಯ ವಿರುದ್ಧ ಮುಸ್ಲಿಂ ಐಕ್ಯತ ವೇದಿಕೆ ಸುರತ್ಕಲ್ ಇದರ ವತಿಯಿಂದ ಇಂದು ಸೆಪ್ಟೆಂಬರ್ 16ರಂದು ಸಂಜೆ 4:00ಗೆ ಮಂಗಳೂರು ಕ್ಲಾಕ್ ಟವರ್ ಮುಂಭಾಗದಲ್ಲಿ ನಡೆಯುವ ಐತಿಹಾಸಿಕ ಬೃಹತ್ ಪ್ರತಿಭಟನೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿ ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇವೆ
Tags:
News