Noore Ajmeer Valiyudheen faizy going to Dubai because of grand Noore Ajmeer MAJLISH in dubai

ನೂರೇ ಅಜ್ಮೀರ್ ಸಾರಥಿ ವಲಿಯುದ್ದೀನ್ ಫೈಝಿ ಅವರಿಗೆ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ, ಸೆಪ್ಟೆಂಬರ್ 18 ರಂದು ದುಬೈಯಲ್ಲಿ ಬೃಹತ್ ನೂರೇ ಅಜ್ಮೀರ್


ಶಾರ್ಜಾ: SKSSF ಕರ್ನಾಟಕ ಯುಎಇ ಸಮಿತಿ ಹಾಗೂ ವಿಖಾಯ ಕರ್ನಾಟಕ ಯುಎಇ ಸಮಿತಿ ಅಧೀನದಲ್ಲಿ ಸೆಪ್ಟೆಂಬರ್ 18 ರಂದು ದುಬೈಯಲ್ಲಿ ನಡೆಯುವ ಬೃಹತ್ ನೂರೇ ಅಜ್ಮೀರ್ ಮತ್ತು ಸ್ಪೂರ್ತಿದಾಯಕ ಪಯಣ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ಸಾರಥಿ ವಲಿಯುದ್ದೀನ್ ಫೈಝಿ ಉಸ್ತಾದ್ ಮತ್ತು ಮುನವ್ವರ್ ಯಮಾನಿ ಉಸ್ತಾದರನ್ನು SKSSF ಮತ್ತು ವಿಖಾಯ ನಾಯಕರು ಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯವಾಗಿ ಸ್ವಾಗತಿಸಿದರು.

 ಈ ಸಂದರ್ಭದಲ್ಲಿ SKSSF ಕರ್ನಾಟಕ ಯುಎಇ ಸಮಿತಿ ಅಧ್ಯಕ್ಷ ಸೈಯದ್ ಅಸ್ಕರ್ ಅಲಿ ತಂಙಳ್, ಸರ್ಗಲಯ ಯುಎಇ ಕರ್ನಾಟಕ ಚಯರ್ ಮೇನ್ ಹಾಗೂ ದಾರುನ್ನೂರು ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್, ಟ್ರೆಂಡ್  ಯುಎಇ ಕರ್ನಾಟಕ ಚಯರ್ ಮೇನ್ ಜನಾಬ್ ನೂರ್ ಮುಹಮ್ಮದ್ ನೀರ್ಕಜೆ, ದಾರುಸ್ಸಲಾಂ ಯುಎಇ ಕೋಶಾಧಿಕಾರಿ ಜನಾಬ್ ಅಬೂಬಕ್ಕರ್ ಆತೂರು, ವಿಖಾಯ ಕರ್ನಾಟಕ ಯುಎಇ ಚಯರ್ ಮೇನ್ ನವಾಝ್ ಬಿಸಿ ರೋಡ್, ಕನ್ವೀನರ್ ಅಬ್ದುಲ್ ಅಝೀಝ್ ಸೋಂಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ನಿಝಾಮ್ ತೋಡಾರ್ ಮತ್ತು ಶಾಹುಲ್ ಬಿಸಿ ರೋಡ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು