ಶ್ರೀಲಂಕಾದಂತೆ ಅಪ್ಗಾನ್ ಕೂಡಾ ನಮಗೆ ಪಾಠವಾಗಲಿ
ನಿನ್ನೆ ರಾತ್ರಿ ಅಫ್ಘಾನ್ ನ ಕಾಬೂಲ್ ನಲ್ಲಿ ಮಸೀದಿಯಲ್ಲಿ ಮಗ್ರಿಬ್ ನಮಾಜ್ ಮಾಡುವ ವೇಳೆ ಬಾಂಬ್ ಸ್ಪೋಟಿಸಿ ತನ್ನದೇ ಜಾತಿಯವರನ್ನು ಕೊಂದು ಹಾಕಿದ್ದಾರೆ ರಾಕ್ಷಸರು.
ಹಾಗೆ ನೋಡಿದರೆ ಪಾಕ್, ಸಿರಿಯಾ,ಇರಾಕ್,ಇರಾನ್ ಮೊದಲಾದ ದೇಶಗಳಲ್ಲಿ ಇದು ಸಾಮಾನ್ಯವಾಗಿದೆ.
ಈ ರಾಕ್ಷಸರ ಪಾಶವೀ ಕೃತ್ಯದಿಂದಾಗಿ ಇತರ ಧರ್ಮೀಯರೆಡೆಯಲ್ಲಿ ಇಸ್ಲಾಂ ಧರ್ಮವು ವ್ಯಾಪಕ ಅಪ ಪ್ರಚಾರಕ್ಕೆ ಒಳಗಾಗಿದೆ.
ಹೌದು ಇದರಲ್ಲಿ ಅವರನ್ನು ದೂರಿ ಪ್ರಯೋಜನವಿಲ್ಲ.
ಇಸ್ಲಾಮೀ ಗ್ರಂಥಗಳಲ್ಲಿ ಬಹಳ ಉತ್ತಮ ವಿಚಾರಗಳಿವೆ. ಬೇರೇನನ್ನೂ ನೋಡದೇ
ಅದನ್ನು ನೋಡಿದರೆ ಸಾಕು ಎಂದು ಇತರರಲ್ಲಿ ನಮಗೆ ಹೇಳುವುದು ಸುಲಭ.
ಎಲ್ಲಿವರೇಗೆ ಗ್ರಂಥಗಳ ಆಶಯಗಳು ನಮ್ಮ ಬದುಕಲ್ಲಿ ಪ್ರತಿಫಲಿಸುವುದಿಲ್ಲವೋ ಅಲ್ಲಿ ತನಕ ಬರೀ ಗ್ರಂಥಗಳ ಉತ್ತಮ ವಿಚಾರಗಳು ಪರಿಣಾಮಕಾರಿ ಆಗಿರುವುದಿಲ್ಲ ಎಂಬುದನ್ನು ನೆನಪಿಡ ಬೇಕು.
ಒಂದು ದೇಶದ ಸಂವಿಧಾನ ಎಷ್ಟೇ ಸುಂದರವಾಗಿದ್ದರೂ ಅದರ ಫಲಶೃತಿಯು ಅದನ್ನು ಜಾರಿ ಗೊಳಿಸುವ ಆಡಳಿತಗಾಗರರನ್ನು ಹೊಂದಿಕೊಂಡಿದೆ.
ಅದೇ ರೀತಿ ಒಂದು ಧರ್ಮದ ಗ್ರಂಥಗಳು ಸಮಾಜದಲ್ಲಿ ಪರಿಣಾಮಕಾರಿಯಾಗಲು ಗ್ರಂಥದ ಅನುಯಾಯಿಗಳು ಯಾವ ತೆರನಾದವರು ಎಂಬುದನ್ನು ಅವಲಂಬಿಸಿರುತ್ತದೆ.
ಭಾರತದಂತಹ ವೈವಿದ್ಯ ಜಾತಿ ಜನಾಂಗ ವಾಸಿಸುತ್ತಿರುವ ಒಂದು ಸೂಕ್ಷ್ಮ ದೇಶದಲ್ಲಿ ಅಲ್ಲಿನ ಧರ್ಮಾತೀತ ಆಶಯದ ಸಂವಿಧಾನ ಬಲಿಷ್ಟವಾಗಿ ಉಳಿಯುವುದು ಮತ್ತು ಅದನ್ನು ಸಮಗ್ರವಾಗಿ ಜಾರಿಗೊಳಿಸುವುದು ದೇಶದ ಹಿತ ಹಿತದೃಷ್ಡಿಯಿಂದ ಬಹಳ ಮುಖ್ಯವಾಗುತ್ತದೆ.
ನಮ್ಮ ದೇಶದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಕೆಲವೊಮ್ಮೆ ಅಹಿತರಕರ ಘಟನೆ ನಡೆಯುವುದಿದ್ದರೂ ಪ್ರಾರ್ಥನೆಯ ವೇಳೆ ಪರಸ್ಪರ ಬಾಂಬ್ ಹಾಕಿ ಕೊಳ್ಳುವ ಸಂಸ್ಕೃತಿ ಈ ತನಕ ಬೆಳೆದು ಬಂದಿಲ್ಲ.
ಅದೇ ನಮ್ಮ ಪುಣ್ಯ.
ಅದಕ್ಕೆ ಹೇಳುವುದು,
ಈಗ ತಣ್ಣಗೆ ಬೆಳೆದು ಬರುತ್ತಿರುವ ಎಲ್ಲಾ ರೀತಿಯ ಮತಾಂಧತೆಯನ್ನು ಬೇರು ಸಮೇತ ಕಿತ್ತು ಹಾಕದಿದ್ದರೆ ಮುಂದೆ ನಮಗೂ ಅಪಾಯ ಕಾದಿದೆ.