ಜೆಡಿಎಸ್ ಮಂಗಳೂರು ದಕ್ಷಿಣ‌ ವಿಧಾನಸಭಾ ಕ್ಷೇತ್ರದ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

ಜೆಡಿಎಸ್ ಮಂಗಳೂರು ದಕ್ಷಿಣ‌ ವಿಧಾನಸಭಾ ಕ್ಷೇತ್ರದ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

ಮಂಗಳೂರು : ಆಗಸ್ಟ್ 15 

         ಜೆಡಿಎಸ್ ಮಂಗಳೂರು ದಕ್ಷಿಣ‌ ವಿಧಾನಸಭಾ ಕ್ಷೇತ್ರದ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಮತ್ತು ಧ್ವಜಾರೋಹಣ ಕಾರ್ಯಕ್ರಮವು  ಮಲ್ಲಿಕಟ್ಟೆಯ ಸುಮಾ ಸಧನದಲ್ಲಿ ನಡೆಯಿತು.


     ಕಾರ್ಯಕ್ರಮದ ಅಧ್ಯಕ್ಷತೆಯನ್ನು‌ ಜೆಡಿಎಸ್ ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷೆ ಡಾ‌ ಸುಮತಿ ಹೆಗ್ಡೆಯವರು ವಹಿಸಿದರು. ನಿವೃತ್ತ ಆಭಾಕರಿ ಅಧೀಕ್ಷಕರಾದಂತಹ ಸದಾಶಿವ ಹೆಗ್ಡೆ   ಧ್ವಜಾರೋಹಣಗೈದರು.
ಡಾ! ಸುಮತಿ ಹೆಗ್ಡೆ ಮಾತನಾಡಿ ಮುಂದೆ ಭಾರತ ದೇಶದ  ಸೌಹಾರ್ದತೆಯನ್ನು ಕಾಪಾಡಿ, ಜಾತ್ಯಾತೀತ ನೆಲೆಯನ್ನು ಭದ್ರಪಡಿಸಲು ಸರ್ವರೂ
ಪಣತೊಡಬೇಕಿದೆ‌ ಎಂದೂ, ಈ ಮೂಲಕ ಕೋಮುವಾದಿಗಳನ್ನು ಅಲಿಸಿ ಶಾಂತಿಯುತ ವಾದ ಹಾಗೂ  ಶಕ್ತಿಯುತವಾದ  ಭಾರತವನ್ನು 
ನಿರೀಕ್ಷಿಸುವ ಜನತೆಯ ಆಸೆ  ಈಡೇರಲೆಂದು ಆಶಿಸಿದರು. ಹಾಗೂ ಇಕ್ಬಾಲ್ ಆಹಮದ್ ಮುಲ್ಕಿ ರವರು ಸ್ವಾತಂತ್ರ್ಯ ಬಗ್ಗೆ ಮಾತನಾಡಿದರು


       ಕರ್ನಾಟಕ ಪ್ರದೇಶ ಜನತಾದಳ‌ ಕಾರ್ಯದರ್ಶಿ ಜನಾಬ್ ಇಕ್ಬಾಲ್ ಅಹಮದ್ ಮುಲ್ಕಿ, ಜೆಡಿಎಸ್ ದ.ಕ  ಸೇವದಳ ಆಧ್ಯಕ್ಷ ನಝೀರ್ ಸಾಮಣಿಗೆ, ಲತೀಫ್ ಶಿವಭಾಗ್, ವೀಣಾ ಶೆಟ್ಟೆ , ಶಾರದಾ ಶೆಟ್ಟಿ, 
ಉಶಾ  ಟೀಚರ್, ಕವಿತಾ, ನಿರ್ಮಲಾ ಪದವು ಬಂಟ್ವಾಳ ಮಹಿಳಾ ಜೆಡಿಎಸ್ ಅಧ್ಯಕ್ಷೆ ಖೈರುನ್ನಿಸಾ ಮೆಲ್ಕಾರ್ , ಜಾವೆದ್ ಹಾಗೂ ಮಹಮ್ಮದ್ ಹನೀಪ್, ಲತೀಫ್ ವಲಚಿಲ್, ಪ್ರಕಾಶ್ ಗೊಂಮ್ಸ  ಮುಖ್ಯ ಅತಿಥಿಗಳಾಗಿ‌ ಪಾಲ್ಗೊಂಡರು. 

  ಈ‌‌‌ ಸಂಧರ್ಭ ಹಲವು ಭಾಗದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು‌ ಡಾ ಸುಮತಿ ಹೆಗ್ಡೆ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಕೊನೆಯಲ್ಲಿ ಲಘು ಉಪಹಾರ ಏರ್ಪಡಿಸಲಾಯಿತು.‌
ಮುಹಮ್ಮದ್ ಅಲ್ತಾಫ್ ತುಂಬೆ ಕಾರ್ಯಕ್ರಮ‌ ನಿರೂಪಿಸಿದರು, ಶಾಲಿನಿ ರೈ ರವರು ವಂದಿಸಿದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು