ಕರ್ನಾಟಕ ರಾಜ್ಯದಲ್ಲೇ ಮಾದರಿಯಾದ ಹರೇಕಳ ಗ್ರಾಮ ಪಂಚಾಯತ್ ಇಂದು ಸಂಜೆ ಉದ್ಘಾಟನೆ,ಧ್ವಜಾರೋಹಣ ನೆರವೇರಿಸಿದ ಶಾಸಕ ಯು.ಟಿ.ಖಾದರ್
ಕರ್ನಾಟಕ ರಾಜ್ಯದಲ್ಲಿಯೇ ಮಾದರಿಯಾಗಿ ಹರೇಕಳ ಗ್ರಾಮ ಪಂಚಾಯತ್ ಕಟ್ಟಡವು ನಿರ್ಮಾಣವಾಗಿದ್ದು ಮಾನ್ಯ ಶಾಸಕರಾದ ಯು.ಟಿ.ಖಾದರ್ ರವರ ಅಧ್ಯಕ್ಷತೆಯಲ್ಲಿ ಇಂದು ಸಂಜೆ ಲೋಕಾರ್ಪಣೆಗೊಳ್ಳಲಿದೆ.
ಈ ಪ್ರಯುಕ್ತ ಇಂದು ಬೆಳಗ್ಗೆ ಹರೇಕಳ ಪಂಚಾಯತ್ ನೂತನ ಕಟ್ಟಡದ ಹೊರಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಸದಸ್ಯರು,ಸಿಬ್ಬಂದಿ ವರ್ಗ,ಊರ ಹಿರಿಯ ನಾಗರಿಕರು,ಶ್ರೀ ರಾಮಕೃಷ್ಣ ಶಾಲೆ ಹರೇಕಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವರ್ಗದವರ ಸಮ್ಮುಖದಲ್ಲಿ ಶಾಸಕ ಯು.ಟಿ.ಖಾದರ್ ಧ್ವಜಾರೋಹಣ ನೆರವೇರಿಸಿದರು.
ಇಂದು ಸಂಜೆ ರಾಜ್ಯ ಮಟ್ಟದ ಅನೇಕ ಸಾಮಾಜಿಕ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಪಂಚಾಯತ್ ಕಟ್ಟಡ ಲೋಕಾರ್ಪಣೆಗೊಳ್ಳಲಿದ್ದು,ಕಟ್ಟಡದಲ್ಲಿ ಸುಸಜ್ಜಿತವಾದ ಆಡಳಿತ ಕಛೇರಿ,ಸಭಾಂಗಣ,ಕಂದಾಯ ಕಛೇರಿ,ಅಂಚೆ ಕಛೇರಿ,ಗ್ರಂಥಾಲಯ,ಶೌಚಾಲಯಗಳನ್ನು ಒಳಗೊಂಡಿದ್ದು ಹೊರಾಂಗಣದಲ್ಲಿ ಸುಂದರವಾದ ಉದ್ಯಾನವನ ಹಾಗೂ ವಾಹನ ನಿಲುಗಡೆಗೆ ಅವಕಾಶಗಳನ್ನು ಕೂಡಾ ಒಳಗೊಂಡಿದೆ.