ಸುನ್ನೀ ಮಹಲ್ ಫೆಡರೇಶನ್ ಮಂಗಳೂರು ವಲಯ ಅಸ್ತಿತ್ವಕ್ಕೆ.
Representative image |
ಅದ್ಯಕ್ಷರಾಗಿ ಮೌಲಾನಾ ಯುಕೆಎ ದಾರಿಮಿ ಚೊಕ್ಕಬೆಟ್ಟು ಆಯ್ಕೆ
ಮಂಗಳೂರು;
ಮಸೀದಿಗಳನ್ನು ಕೇಂದ್ರೀಕರಿಸಿ ಮುಸ್ಲಿಮರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಲು ಅನುಕೂಲವಾಗುವಂತೆ ಮೊಹಲ್ಲಾ ಸಮಿತಿಗಳನ್ನು ಜಿಲ್ಲಾ ಮಟ್ಟದಲ್ಲಿ ಪೋಣಿಸುವ ನಿಟ್ಟಿನಲ್ಲಿ "ಸಮಸ್ತ "ದ ಮಾರ್ಗ ದರ್ಶನದಂತೆ ಸುನ್ನಿ ಮಹಲ್ ಫೆಡರೇಶನ್ ವಲಯ ಮಟ್ಟದ ಸಮಿತಿಗಳನ್ನು ರಚಿಸಲಾಗುತ್ತಿದ್ದು ಮಂಗಳೂರು ವಲಯ ಸಮಿತಿಯ ರಚನೆಯು ಮಂಗಳೂರಿನ ಕಂಕನಾಡಿಯಲ್ಲಿರುವ ಜಂಇಯ್ಯತುಲ್ ಫಲಾಹ್ ಆಡಿಟೋರಿಯಂ ನಲ್ಲಿ ದಿನಾಂಕ 21 ಸೋಮವಾರ ನಡೆಯಿತು.
ಸುನ್ನೀ ಮಹಲ್ ಫೆಡರೇಷನ್ ನೋಂದಣಿ ಗೊಂಡ ಮೊಹಲ್ಲಾಗಳ ಆಯ್ದ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
ಸಮುದಾಯದ ವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಸೂಚಿಯನ್ನು ಮುಂದಿಟ್ಟು ಮೊಹಲ್ಲಾಗಳಲ್ಲಿ ಕಾರ್ಯರೂಪಕ್ಕೆ ತರುವ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯಬೇಕೆಂದು ಕಾರ್ಯಕ್ರಮ ಉದ್ಘಾಟಿಸಿ ಮೌಲಾನಾ ಅಝೀಝ್ ದಾರಿಮಿ ಕರೆ ನೀಡಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ ಉಸ್ತಾದ್ ಎಸ್ ಬಿ ದಾರಿಮಿಯವರು ಮಾತನಾಡಿ ಮೊಹಲ್ಲಾ ಪದ್ದತಿಯು ಮುಸ್ಲಿಮರ ಅವಿಭಾಜ್ಯ ಧಾರ್ಮಿಕ ಅಂಗವಾಗಿದ್ದು ಇದನ್ನು ಶಿಥಿಲೀಕರಿಸುವ ಯಾವುದೇ ಚಟುವಟಿಕೆಗಳಿಗೆ ಯಾರೂ ಪ್ರೋತ್ಸಾಹ ನೀಡ ಬಾರದು. ಮೊಹಲ್ಲಾಗಳು ಇಚ್ಚಾಶಕ್ತಿ ಪ್ರದರ್ಶಿಸಿದರೆ ಮುಸ್ಲಿಮರ ಬಹುತೇಕ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮ ದ ಉಸ್ತುವಾರಿ ವಹಿಸಿದ್ದ ತಬೂಕ್ ದಾರಿಮಿ ಯವರು ಎಸ್ ಎಮ್ ಎಫ್ ಬಗ್ಗೆ ಸಭೆಗೆ ವಿವರಿಸಿ ಸ್ವಾಗತಿಸಿದರು.
ಹುಸೈನ್ ರಹ್ಮಾನಿ ದಾರುನ್ನೂರು ವಿಷಯ ಮಂಡಿಸಿದರು.
ಝೀನತ್ ಬಕ್ಷ್ ಖತೀಬ್ ಅಬುಲ್ ಅಕ್ರಂ ಉಸ್ತಾದ್ ದುಹಾಗೈದರು.
ಕುಕ್ಕಿಲ ದಾರಿಮಿ ,ಮೆಟ್ರೋ ಹಾಜಿ ಶುಭ ಹಾರೈಸಿದರು.
ಐ ಮೊಯಿದಿನಬ್ಬ ಹಾಜಿ,ಹನೀಪ್ ಹಾಜಿ ಮಂಗಳೂರು,ರಫೀಕ್ ಹಾಜಿ ಕೊಡಾಜೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಇಬ್ರಾಹಿಂ ಕೊಣಾಜೆ ವಂದಿಸಿದರು.
ವಲಯ ಸಮಿತಿ ಸದಸ್ಯರುಗಳ ಪಟ್ಟಿಯನ್ನು ಪರಿಶೀಲಿಸಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದ ಎಸ್ ಬಿ ದಾರಿಮಿಯವರು ಮುಂದಿನ ಅವಧಿಗೆ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆಮಾಡಿದರು.
1.ಅಧ್ಯಕ್ಷರಾಗಿ: ಬಹು! ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು
2.ಪ್ರಧಾನ ಕಾರ್ಯದರ್ಶಿ ಯಾಗಿ : *ಜನಾಬ್ ಇಬ್ರಾಹಿಂ ಕೊಣಾಜೆ
3., ಕೋಶಾಧಿಕಾರಿಯಾಗಿ: ಜನಾಬ್ :*ಎನ್.ಕೆ.ಅಬೂಬಕ್ಕರ್. ಕುದ್ರೋಳಿ,
4.ಉಪಾಧ್ಯಕ್ಷರುಗಳಾಗಿ:
1).ಜನಾಬ್ ಹನೀಫ್ ಹಾಜಿ ಬಂದರ್
2).ಬಹು! ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ
3).ಬಹು! ಅಬ್ದುಲ್ ರ್ರಹ್ಮಾನ್ ದಾರಿಮಿ ತಬೂಕ್
5.ಜತೆ ಕಾರ್ಯದರ್ಶಿಗಳಾಗಿ:
1).ಜನಾಬ್ ಸಾಹುಲ್ ಹಮೀದ್ ಹಾಜಿ ಮೆಟ್ರೋ
2).ಜನಾಬ್ ರಿಯಾಝ್ ಹಾಜಿ ಬಂದರ್
3). ಜನಾಬ್: ಮುಹಮ್ಮದ್ ಶಾಫಿ ಪಡ್ಡಂದಡ್ಕ
ಜಿಲ್ಲಾ ಕೌನ್ಸಿಲರ್ ಗಳಾಗಿ
:
1).ಜನಾಬ್ ಐ.ಮೊಯ್ದಿನಬ್ಬ ಹಾಜಿ
2).ಜನಾಬ್ ಇಸ್ಮಾಯಿಲ್ ಹಾಜಿ ಉಳಾಯಿಬೆಟ್ಟು ಮತ್ತು
3).ಮುಹಮ್ಮದ್ ಸ್ವಾಲಿಹ್ ಕಣ್ಣೂರು*
Tags:
News