SKSSF campus wing meet 2022

SKSSF ಪರಣೆ ಶಾಖೆ ವತಿಯಿಂದ ಕ್ಯಾಂಪಸ್ ಮೀಟ್
Representative Image

2022 ಸಾಲಿನ SKSSF ಪರಣೆ ಶಾಖೆ ಕ್ಯಾಂಪಸ್ ವಿಂಗ್ ಹೊಸ ಸದಸ್ಯರ ನೇಮಕ ಕಾರ್ಯಕ್ರಮ ವು 17/9/2022 ರಂದು ಪರಣೆ ಮದ್ರಸ ಹಾಲ್ ನಲ್ಲಿ ಸರಿಯಾಗಿ ರಾತ್ರಿ 8:30 ಗೆ ಆರಂಭವಾಯಿತು...!

ಕಾರ್ಯಕ್ರಮದ ಉದ್ಘಾಟನೆಯನ್ನು ಪರಣೆ ಮಸೀದಿ ಖತೀಬ್ ಸಂಶುದ್ದೀನ್ ಫೈಝಿ ನೆರವೇರಿಸಿದರು ,ಅದೇ ರೀತಿ ಪರಣೆ ಶಾಖೆ skssf ಕಾರ್ಯದರ್ಶಿ ಜಮಾಳು ದ್ದೀನ್ ಅ ಝ್ ಹರಿ ಸ್ವಾಗತ ಕೋರಿದರು...! 

ನಂತರದಲ್ಲಿ skssf ಕ್ಯಾಂಪಸ್ ವಿಂಗ್ ಕಾರ್ಯ ಪ್ರವೃತ್ತಿಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹನೀಫ್ ಸವಣೂರು ಇವರು ಮಾತನಾಡಿದರು...! 

ನಂತರ skssf ಪರಣೆ ಶಾಖೆ ಕ್ಯಾಂಪಸ್ ವಿಂಗ್ ಗೆ ಹೊಸ ಸದಸ್ಯರನ್ನು ಸೇರಿಸಲಾಯಿತು ,ಹೊಸ ಚೇರ್ಮನ್ ಆಗಿ muyiz ಪರಣೆ ,ಕನ್ವೀನರ್ ಆಗಿ ಅರ್ಷಕ್ ,ಕಜಾಂಜಿ ಆಗಿ ಆದಿಲ್ ಅ ಬಾಬಿಲ್ ,ವೈಸ್ ಚೇರ್ಮನ್ ಆಗಿ ರಕೀಕ್ ಕುಂಬಮೂಲೆ ಅವರನ್ನು ಆರಿಸಲಾಯಿತು...! 

ಕಾರ್ಯಕ್ರಮದಲ್ಲಿ ಪರಣೆ skssf ಶಾಖೆ ಅಧ್ಯಕ್ಷರಾದ ಯ ಹ್ಯ ಖಾನ್ ಕುಂಬ ಮೂಲೆ ,ಜಮಾ ಅತ್ ಕಮೀಟಿ ಕೋಶಾಧಿಕಾರಿ ಮೂಸ ಪರಣೆ ಮುಂತಾದವರು ಉಪಸ್ಥಿತರಿದ್ದರು ,ಕೊನೆಯಲ್ಲಿ ಕಾರ್ಯದರ್ಶಿ ಧನ್ಯವಾದ ಅರ್ಪಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು..!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು