kinya range respected Darimi usthad

ಮಾದರಿಯಾಗಿ ಕಿನ್ಯ ರೇಂಜ್ !!
ಹನೀಫ್ ದಾರಿಮಿ ಉಸ್ತಾದರಿಗೆ ಸನ್ಮಾನಿಸಿದ ಚಿತ್ರ

ಕಾರಣ ಮುಅಲ್ಲಿಂ ಡೇ ದಿನ ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದು ಮುಅಲ್ಲೀಂ ಉಸ್ತಾದ್ ಗಳಿಗೆಲ್ಲ ಸಾವಿರ ರೂಪಾಯಿಗಳಿಗಿಂತ ಜಾಸ್ತಿ ವೆಚ್ಚದ ಉಡುಗೊರೆ ಕೊಟ್ಟು ಕೆಲವು ಮಾಜಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಅದರಂತೆ  ಕೆಲವು ಮುದರ್ರಿಸರನ್ನು ಸನ್ಮಾನಿಸಲಾಯಿತು. 
ನನ್ನ ಉಸ್ತಾದ್ ಶೈಖುನಾ ಹನೀಫ್ ದಾರಿಮಿ ಕೂಡ ಅವರಲ್ಲೊಬ್ಬರು ಎನ್ನುವುದು ಈ ನನ್ನ ಬರಹಕ್ಕೆ ಕಾರಣ. ಕಿನ್ಯ ಜಮಾಅತ್ ಅದ್ಯಕ್ಷ ಇಸ್ಮಾಯಿಲ್ ಹಾಜಿಯವರು ಅವರನ್ನು ಸನ್ಮಾನಿಸಿದರು. 


ಉಸ್ತಾದ್ ರವರ ದರ್ಸ್ ನಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಹಲವಾರು ಫೀಲ್ಡ್ ಗಳಲ್ಲಿ ಕಾರ್ಯಪ್ರವರ್ತಕರಾಗಿದ್ದಾರೆ. ಇಲ್ಲಿ ಸಮಸ್ತದ ದರ್ಸ್ ಗಳು ವಿರಳವಾದ ಸಂದರ್ಭ ವಿತ್ತು ಅಂದು ಉಸ್ತಾದ್ ರವರ ದರ್ಸ್ 
ಅಭಿಮಾನ ವಾಗಿತ್ತು. ಒಂದು ಮೊಹಲ್ಲದಿಂದ ಬಿಡುವಾಗ ಹತ್ತಾರು ಮೊಹಲ್ಲಗಳಿಗೆ ಆಹ್ವಾನ ಬರುತಿತ್ತು. ಕಾರಣ ಇಷ್ಟೇ ಅಂದು ಬೆರಳೆಣಿಕೆಯಷ್ಟು ದಾರಿಮಿಗಳು ಮಾತ್ರ ಮುದರ್ರಿಸರಾಗಿದ್ದದ್ದು. 
ನಂತರ ಸಮಸ್ತ ದರ್ಸ್ ಗಳು ಜಾಸ್ತಿ ಯಾಯಿತು. ಈಗೀಗ ಅದು ಕಡಿಮೆ ಯಾಗಿ ಸ್ಥಾಪನೆಗಳು ಬಂದವು. ನನ್ನ ಉಸ್ತಾದ್ ದರ್ಸ್ ಕೈ ಬಿಡದೆ ಮುಂದುವರಿಯುತ್ತಿದ್ದಾರೆ. ಅಲ್ ಹಂದುಲಿಲ್ಲಾಹ್! 



ಅವರನ್ನು ಗುರುತಿಸಿ ಕಿನ್ಯ ರೇಂಜ್ ಸನ್ಮಾನ ನೀಡಿ ಗೌರವಿಸುದರೊಂದಿಗೆ ಪ್ರೋತ್ಸಾಹ ನೀಡಿದೆ.  ಉಸ್ತಾದ್ ರ ಹತ್ತಿರ ಕಲಿತ ವಿದ್ಯಾರ್ಥಿಗಳು ಮದ್ರಸ, ಮಸೀದಿ, ಸಂಘಟನೆಗಳಲ್ಲಿ ಎಲ್ಲಾ ಇದ್ದಾರೆ 
ದಾರಿಮಿ, ಫೈಝಿ, ಝೈನಿ ಅಸ್ಲಮೀಗಳಿದ್ದಾರೆ. 
ಅದೇ ರೀತಿ ದೇಶ- ವಿದೇಶಗಳಲ್ಲಿ ಕೂಡ ಉನ್ನತ ಮಟ್ಟದಲ್ಲಿ ಕೆಲಸದಲ್ಲಿದ್ದಾರೆ.

ಈಗ
ಪಟ್ಟಿಕಾಡಿನಲ್ಲಿಕಲಿಯುತ್ತಿರವ ಮತ್ತು ತನ್ನ ದರ್ಸ್ ನಲ್ಲಿ ಕಲಿಯುವ ಒಬ್ಬ ವಿದ್ಯಾರ್ಥಿ ಯಾನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಡಾಕ್ಟರ್ ಕಲಿಯುವವ ಕೂಡ ಇದ್ದಾರೆ. ಅಂದರೆ ಧಾರ್ಮಿಕ ದೊಂದಿಗೆ ಲೌಕಿಕ ವಿದ್ಯೆ ಗೂ ಉಸ್ತಾದ್ ರ ದರ್ಸ್ ನಲ್ಲಿ ಪ್ರೋತ್ಸಾಹ ಇದೆ. ಅವರು ವಿದ್ಯಾರ್ಥಿ ಗಳೊಂದಿಗೆ ಪ್ರೀತಿ ತೋರುತ್ತಾರೆ. ಆದರೆ ತಪ್ಪು ಕಂಡರೆ ತುಂಬಾ ಕೋಪಗೊಳ್ಳುತ್ತಾರೆ. ಅಪಾರವಾದ ಜ್ಞಾನ ಭಂಡಾರ ಅವರಲ್ಲಿದ್ದರೂ ಸರಳ ಸಾಮಾನ್ಯ ಜನರಂತೆ ಓಡಾಡುವ ಅವರ ಶೈಲಿ ಮಾತ್ರ ಮೆಚ್ಚುಗೆ ಪಡೆದಿದೆ. 



ಇನ್ನು ದಾರ್ಮಿಕ ಮಜ್ಲಿಸ್, ವೇದಿಕೆ, ಸಭೆ, ಇಮಾತ್ ನಂತಹ ಸಂಧರ್ಭದಲ್ಲಿ ಅವರ ವಿದ್ಯೆ- ಗೌರವ ಒಂದೊಂದು ಮಾತು ಅದು ಯಾರಿಗೂ ವಿಸ್ಮಯ ವಾಗುವಂತದ್ದು. ಅವರ ಬದುಕಿನ ಮೇಲೆ ಕಣ್ಣು ತೆರೆದು ನೋಡಿದರೆ ರಿಲೀಫ್ =ಬಡವರ ಬಗ್ಗೆ ಕಾಲಜಿ ಜಾಸ್ತಿ ವಹಿಸಿ ಅವರಿಂದಾಗುವ ರೀತಿಯಲ್ಲಿ ಉಪಕಾರ ಮಾಡುವ ಮೂಲಕ ಅಥವಾ ಮಾಡಲು ಇತರರನ್ನು ಒತ್ತಾಯ ಮಾಡುವ ಅಬ್ಯಾಸ ಕಾಣಬಹುದು, ಉಚಿತ ಪುಸ್ತಕ ವಿತರಣೆ, ವಿವಾಹ, ಮನೆ ಕಟ್ಟಲು ಸಹಾಯ ಇದರಲ್ಲಿ ತಾತ್ಪರ್ಯ ಜಾಸ್ತಿ ಇದೆ. SKSSF, ದಾರಿಮೀಸ್, SYS, ಸಂಘಟನೆ ಗಳಲ್ಲಿ ಅಧಿಕಾರ ವಹಿಸಿ ಯು ಅಲ್ಲದೆಯೂ ದುಡಿದು ಸಮಸ್ತ ಕೇರಳ ಜಂಹಿಯ್ಯತುಲ್ ಉಲಮಾ ಕರ್ನಾಟಕ ಮುಶಾವರ ದಲ್ಲಿ ಹಲವಾರು ವರ್ಷಗಳಿಂದ ಕಾರ್ಯಕರ್ತರು ಆದ ಹನೀಫ್ ದಾರಿಮಿ ಸವಣೂರು ಖ್ಯಾತ ವಾಗ್ಮಿ ಕೂಡ!  ಕನ್ನಡ, ಮಳಯಾಲ ಬ್ಯಾರಿ ಬಾಷೆಯಲ್ಲಿ ಅವರ ಬಾಷಣ ಶೈಲಿಯಲ್ಲಿ ವಿಶೇಷ ವಿಲ್ಲದಿದ್ದರೂ ಕಲಿಯುವವರಿಗೂ ಮತ್ತು ಚಿಂತಿಸುವವರಿಗೆ ಉತ್ತಮ ವಿಷಯಗಳು ಇರುತ್ತದೆ. ಪರಂಪರೆ ಮತಪ್ರಬಾಷಣ ದಾರಾಳವಾಗಿ ಮಾಡಿರುವರು. ಆದರೆ ಈಗ ಹೊಸ ಹೊಸ ಶೈಲಿ, ವಾಗ್ಮಿ ಗಳು ಬಂದಾಗ ಅದರಿಂದ ಸರಿದು ದರ್ಸ್ ರಂಗ ಆಯ್ಕೆ ಮಾಡಿಕೊಂಡು ದಾರುಸ್ಸಲಾಂ ನಾಟೆಕಲ್ ಲ್ಲಿ ಮುದರ್ರಿಸ್ ಆಗಿದ್ದಾರೆ.


ಮಾಸ ಪತ್ರಿಕೆ  ,ಬುಲೆಟಿನ್  ,ದಿನಪತ್ರಿಕೆ  ವಾಟ್ಸಾಪ್ ಫೇಸ್‌ಬುಕ್ ಗಳಲ್ಲಿ ಅನೇಕ ಬಗೆಯ ಲೇಖನ, ಕವನ, ಕಥೆ ಚಿಂತನೆ, ಮೆಸೇಜ್ ಗಳು ಕ್ಲಾಸ್ ಗಳು ಅವರಿಂದ ಸಮಾಜಕ್ಕೆ ಲಭಿಸಿದೆ ಹಲವು ಕಾರ್ಯಕ್ರಮಗಳನ್ನು ಯೋಜಿಸಿ, ಸಮ್ಮೇಳನಗಳನ್ನು ಯಶಸ್ವಿ ಯಾಗಿ ನಡೆಸಿ ತೋರಿಕೊಟ್ಟ ದ್ದು ಇದೆ ನೂರಾರು ಕಾರ್ಯಕ್ರಮ ಗಳಲ್ಲಿ ಅವರ ದುಡಿಮೆ ಕಾಣಬಹುದು. ಎಲ್ಲರಿಗೂ ಇರುವಂತೆ ಅವರನ್ನು ತಮಾಷೆ ಮಾಡುವವರಿರಬಹುದು. ಯಾವುದೇ ವಿಭಾಗದವರೊಂದಿಗೆ ಕಠಿಣವಾದ ಶತ್ರುತ್ವ  ಬೆಳೆಸದೆ ಪ್ರೀತಿಯಿಂದಲೇ ಎದುರಾಲಿಗಳು ಅವರು ಮಾಡುವ ಕಾರ್ಯಕ್ಕೆ ಸಹಕರಿಸುವಂತೆ ಮಾಡುವ ಅವರ ತಾಕತ್ತು 
ಪ್ರಶಂಸನೀಯ.ಅದೆಷ್ಟೊ ದೊಡ್ಡ ರಾಜಕೀಯ,ದಾರ್ಮಿಕ ನಾಯಕರ ಸಂಪರ್ಕ ವಿದ್ದರು ಏನೂ ಗೊತ್ತಿಲ್ಲದವರಂತೆ ಸುಮ್ಮನೆ ಇರುವುದು ಅವರನ್ನು ಕಂಡು ಕಲಿಯಬೇಕು. ಅಲ್ಲಾಹು  ಉಸ್ತಾದ್ ರವರಿಗೆ ದೀರ್ಘಾಯಿಸ್ಸು ಆಫಿಯತ್ತಿನೊಂದಿಗೆ ನೀಡಲಿ ಆಮೀನ್

   ಶಿಷ್ಯ ಸವಾದ್ ಬಂಟ್ವಾಳ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು