in Hyderabad fire accident and 8 people were die

ಹೈದರಾಬಾದ್‌ನಲ್ಲಿ ಅಗ್ನಿ ಅವಘಡದಲ್ಲಿ ಎಂಟು ಮಂದಿ ಸಾವು

ಹೈದರಾಬಾದ್ (ಪಿಟಿಐ): ಇಲ್ಲಿನ ಸಿಕಂದರಾಬಾದ್ ಪ್ರದೇಶದಲ್ಲಿ ಸೋಮವಾರ ಮತ್ತು ಮಂಗಳವಾರದ ಮಧ್ಯರಾತ್ರಿಯ ಸಮಯದಲ್ಲಿ ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಹೋಟೆಲ್‌ನಲ್ಲಿ ತಂಗಿದ್ದ ಎಂಟು ಜನರು ಸಾವನ್ನಪ್ಪಿದ್ದಾರೆ.


ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋರೂಮ್‌ನಿಂದ ಬಂದ ಬೆಂಕಿ ಮತ್ತು ಹೊಗೆಯು ಶೋರೂಮ್‌ನ ಮೇಲಿರುವ ಲಾಡ್ಜ್‌ಗೆ ಆವರಿಸಿದ್ದು, ಬಲಿಪಶುಗಳು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಘಟನೆಯ ವೇಳೆ ಸುಮಾರು 25 ರಿಂದ 30 ಮಂದಿ ಹೋಟೆಲ್‌ನಲ್ಲಿ ತಂಗಿದ್ದರು ಎನ್ನಲಾಗಿದೆ.

ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬಹುಮಹಡಿ ಕಟ್ಟಡದಲ್ಲಿ ಸಿಲುಕಿದ್ದ ಏಳು ಅತಿಥಿಗಳನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

ಬೆಂಕಿಯಿಂದ ಪಾರಾಗಲು ಕೆಲವರು ಹೋಟೆಲ್ ಕಿಟಕಿಗಳಿಂದ ಜಿಗಿಯಲು ಪ್ರಯತ್ನಿಸಿದರು ಎಂದು ಟಿವಿ ದೃಶ್ಯಗಳು ಸೂಚಿಸಿವೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು