ಮದ್ರಸಗಳು ಶಾಂತಿ,ಭ್ರಾತೃತ್ವ ಕಲಿಸುವ ಕೇಂದ್ರ : ಜಂಇಯ್ಯತುಲ್ ಖುತಬಾ ಅಭಿಮತ
ಮಾಣಿ:ವಿಧ್ಯಾರ್ಥಿಗಳಿಗೆ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ಎಳೆಯದರಲ್ಲೇ ಕಲಿಸಿ ಗುರು ಹಿರಿಯರು,ಧರ್ಮ ,ದೇವರ ಬಗ್ಗೆ ಗೌರವ ಮೂಡಿಸಿ ಸತ್ಪ್ರಜೆಗಳಾಗಿ ರೂಪಿಸುವುದೇ ಮದ್ರಸಗಳ ಉದ್ದೇಶ. ಶಾಂತಿ ಮತ್ತು ಭಾತೃತ್ವ,ಸಮಾನತೆಯ ಸಂದೇಶಗಳನ್ನೇ ಇಲ್ಲಿ ಮುಖ್ಯವಾಗಿ ಕಲಿಸಲಾಗುತ್ತದೆ.ದೇಶ ಮತ್ತು ಸಮಾಜದೊಂದಿಗೆ ಪ್ರಜೆಗಳಿಗಿರುವ ಸಾಮಾಜಿಕ ಜವಾಬ್ದಾರಿಯನ್ನು ಮದ್ರಸಗಳಲ್ಲಿ ನೆನಪಿಸಲಾಗುತ್ತದೆ.
ಇಂತಹ ಪವಿತ್ರ ಕೇಂದ್ರಗಳನ್ನು ಅಪ ಪ್ರಚಾರದ ಮೂಲಕ ಇತರ ಧರ್ಮೀಯರು ಸಂಶಯ ಪಡುವಂತೆ ಮಾಡುವ ಕುತ್ಸಿತ ಶ್ರಮಗಳು ನಡೆಯುತ್ತಿರುವುದು ಖೇದಕರ. ಈ ನಿಟ್ಟಿನಲ್ಲಿ ಪ್ರತೀ ಮೊಹಲ್ಲಾಗಳು ಎಚ್ಚೆತ್ತು ಕೊಂಡು ಇಂತಹ ಅಪ ಪ್ರಚಾರಗಳನ್ನು ನೀಗಿಸುವ ಸಲುವಾಗಿ ಉಪಕ್ರಮಗಳನ್ನು ಅಳವಡಿಸಿ ಕೊಳ್ಳಲು ಮುಂದೆ ಬರಬೇಕೆಂದು ಜಂಇಯತುಲ್ ಖುತಬಾ ಜಿಲ್ಲಾ ಸಮಿತಿ ಕರೆ ನೀಡಿದೆ.
ನೇರಳಕಟ್ಟೆ ಸಮಸ್ತ ಮಹಲ್ ನಲ್ಲಿ ಮಂಗಳವಾರ ನಡೆದ ಸೆಕ್ರೆಟರಿಯೇಟ್ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.ಮಾದಕ ದ್ರವ್ಯಗಳಂತಹ ಸಾಮಾಜಿಕ ಪಿಡುಗುಗಳ ವಿರುದ್ದ ಮೊಹಲ್ಲಾಗಳನ್ನು ಕೇಂದ್ರೀಕರಿಸಿ ತ್ರೈಮಾಸಿಕ ಜಾಗೃತಿ ಆಂದೋಲನ ನಡೆಸಲು ತೀರ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷ ಎಸ್ ಬಿ ದಾರಿಮಿ ಉಪ್ಪಿನಂಗಡಿಯವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯನ್ನು ಕಡಬ ಇಬ್ರಾಹಿಂ ದಾರಿಮಿ ಉದ್ಘಾಟಿಸಿದರು.ಸಂಪ್ಯ ಹಮೀದ್ ದಾರಿಮಿ ದುಆಗೈದರು.
ಅಬ್ಬಾಸ್ ದಾರಿಮಿ ಕೆಲಿಂಜ, ರಿಯಾಝ್ ರಹ್ಮಾನಿ, ತಾಜುದ್ದೀನ್ ರಹ್ಮಾನಿ, ಶಂಸುದ್ದೀನ್ ದಾರಿಮಿ, ನಝೀರ್ ಅಝ್ಹರಿ,ಶಂಸುಧ್ಧೀನ್ ಅಶ್ರಫಿ,ಇಬ್ರಾಹಿಂ ಮುಸ್ಲಿಯಾರ್ ಸಿ. ಎಚ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ರಶೀದ್ ರಹ್ಮಾನಿ ಪರ್ಲಡ್ಕ ಸ್ವಾಗತಿಸಿ,ರಶೀದ್ ಯಮಾನಿ ಕಡಬ ವಂದಿಸಿದರು.
Tags:
News