ಚಿಂತನ ಮಂಥನಗಳಿಗೆ ಸಾಕ್ಷಿಯಾದ ಎಸ್ಕೆಎಸ್ಸೆಸ್ಸೆಪ್ ಮೂಡಬಿದ್ರೆ ವಲಯ ಪ್ರೀಡಂ ಸ್ಕ್ವಾರ್
ಇಲ್ಲಿಗೆ ಸಮೀಪದ ಕಾಶಿಪಟ್ಣದಲ್ಲಿ ದಕ ಜಿಲ್ಲಾ ಖಾಝಿಗಳ ನೇತೃತ್ವದಲ್ಲಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿರುವ ದಾರುನ್ನೂರು ಶಿಕ್ಷಣ ಸಂಸ್ಥೆಯ ಅಂಗಳದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಎಸ್ಕೆಎಸ್ಸೆಸ್ಸೆಪ್ ಮೂಡಬಿದ್ರೆ ವಲಯ ಆಯೋಜಿಸಿದ್ದ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮ ಹಲವು ಮಹನೀಯರ ಸಾನಿಧ್ಯದಲ್ಲಿ ಸಮಕಾಲೀನ ಸಮಸ್ಯೆಗಳ ಒಳಸುಳಿವುಗಳು ಮತ್ತು ಅದಕ್ಕೆ ಪರಿಹಾರ ಏನೆಂಬುದರ ಬಗ್ಗೆ ಮಹತ್ವ ಪೂರ್ಣ ಚರ್ಚೆಗಳಿಗೆ ವೇದಿಕೆಯಾಯಿತು.
ಸಂಸ್ಥೆಯ ಮ್ಯಾನೇಜರ್ ಹುಸೈನ್ ರಹ್ಮಾನಿಯ ದುಹಾದೊಂದಿಗೆ ಅಕ್ರಂ ಅಲಿ ತಂಙಳ್ ಅಂಗರ್ಕರ್ಯ ಉದ್ಘಾಟಿಸಿದರು.
ದೇಶದ ಆಡಳಿತ ಚುಕ್ಕಾಣಿ ಹಿಡಿದವರ ತಾರತಮ್ಯ ನೀತಿಯಿಂದಾಗಿ ಸಮಸ್ಯೆಗಳು ಉಲ್ಭಣವಾಗುತ್ತಿದೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಎಲ್ಲಾ ಜಾತಿ ಪಂಗಡದ ಪೂರ್ವಿಕ ಮಹನೀಯರು ಶ್ರಮಿಸಿದ್ದಾರೆ.
ಆದರೆ ಇವತ್ತು ಅದನ್ನು ವ್ಯವಸ್ಥಿತವಾಗಿ ಮರೆಮಾಚಲಾಗುತ್ತಿದೆ ಎಂದರು.
ಹಿರಿಯರಾದ ಸಾಹುಕಾರ ರಾಜಣ್ಣ ಪೂಜಾರಿ ಮಾತನಾಡಿ ದೇಶದಲ್ಲಿ ಹಿಂದು ,ಮುಸ್ಲಿಮರು ಅದರಲ್ಲೂ ಪೂಜಾರಿಗಳು ಯಾಕೆ ಗಲಾಟೆ ಮಾಡಿ ಸಾಯುತ್ತಾರೆ ಎಂದು ಅರ್ಥ ಆಗ್ತಾಇಲ್ಲ,ನಿಜವಾಗಿಯೂ ಮುಸ್ಲಿಮರು ಯಾರನ್ನೂ ಮತಾಂತರ ಮಾಡುತ್ತಿಲ್ಲ.
ಕ್ರೈಸ್ತರಿಗೂ ಹಿಂದುಗಳಿಗೂ ಯಾವುದೇ ಗಲಾಟೆ ಆಗುತ್ತಿಲ್ಲ.
ಇದೆಲ್ಲಾ ಕೆಲವೇ ಕೆಲವರ ರಾಜಕೀಯ ಸ್ವಾರ್ಥಕ್ಕಾಗಿ ನಡೆಯುವ ಆಟ.
ಬೆಳಗ್ಗಿನ ಅಧಾನ್ ನಿಲ್ಲಿಸಿದ್ದು ನಮಗೆಲ್ಲಾ ಬಹಳ ದುಖ ತಂದಿದೆ.
ಸ್ಥಳೀಯವಾಗಿ ಯಾವ ಹಿಂದುಗಳಿಗೆ ಅಧಾನ್ ಕೊಡುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ.
ಕಾನೂನಿನ ಸಮಸ್ಯೆ ಇಲ್ಲದಿದ್ದರೆ ಇಲ್ಲಿನ ಮಸೀದಿಯಲ್ಲಿ ಅಧಾನ್ ಕೊಡುವುದಕ್ಕೆ ನಮ್ಮ ಯಾವ ವಿರೋಧವೂ ಇರುವುದಿಲ್ಲ.
ಅಧಾನ್ ಇಲ್ಲದ ಕಾರಣ ನಮಗೇ ಈಗ ತೊಂದರೆಯಾಗಿದೆ.
ಬೆಳ್ಳಂಬೆಳಗ್ಗೆ ಬಾಂಗ್ ದ್ವನಿ ಕೇಳಿ ಎದ್ದೇಳುತ್ತಿದ್ದೆವು ಎಂದು ಅವರು ಬಹಳ ಬಾವುಕರಾಗಿ ನುಡಿದರು.
ಪ್ರಖರ ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿ, ದೇಶದಲ್ಲಿರುವ ಸದ್ಯದ ಸಮಸ್ಯೆಗಳ ಹಿನ್ನಲೆ ಮತ್ತು ಅದಕ್ಕೆ ಇರುವ ಪರಿಹಾರದ ಬಗ್ಗೆ ಬಹಳ ಸೊಗಸಾಗಿ ಮಾತನಾಡಿದರು.
ನಮಗೆ ಇಂದಿನ ತಲೆಮಾರಿಗೆ ಸ್ವಾತಂತ್ರ್ಯ ಹೋರಾಟದ ಘಟನಾವಳಿಯ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ.
ಗಾಂದಿಯ ಚರಕ ಮತ್ತು ಉಪ್ಪು ಸತ್ಯಾಗ್ರಹ ಸ್ವಾತಂತ್ರ್ಯ ತಂದು ಕೊಟ್ಟಿತು ಎಂದು ಹೇಳುತ್ತೇವೆ.ಆದರೆ ಅದು ಹೇಗೆ ಆಯಿತು? ಎಂಬುದು ನಮಗೆ ತಿಳಿದಿಲ್ಲ.
ಬ್ರಿಟಿಷರ ಆರ್ಥಿಕ ಮೂಲವಾದ ಜವುಳಿ ಉದ್ಯಮವನ್ನ ಗುರಿಯಾಗಿಸಿ ಗಾಂದಿಯವರು ಸ್ವದೇಶಿ ವಸ್ತುಗಳನ್ನು ತಯಾರಿಸಲು ಚರಕವನ್ನು ಬಳಸಿ ಕೊಂಡರು.
ಬ್ರಿಟನಿಂದ ಬರುವಾಗ ಹಡಗಿನ ಸಮತೋಲನ ಕಾಪಾಡಲು ಉಪ್ಪು ತರುತ್ತಿದ್ದರು.ಇಲ್ಲಿ ಅದನ್ನು ಉತ್ಪಾದಿಸುವವರಿಗೆ ಜುಲ್ಮಾನೆ ಹಾಕುತ್ತಿದ್ದರು.
ಅದಕ್ಕೆ ಉಪ್ಪು ಸತ್ಯಾಗ್ರಹ ಮಾಡಿದ್ದರು ಎಂದು ಇತಿಹಾಸದ ಪಾಠ ಹೇಳಿದ ಅವರು
ಬ್ರಿಟಿಷರಿಗೆ ಮೊದಲು ಮುಸ್ಲಿಮರೇ ಶತ್ರುಗಳಾಗಿದ್ದರು.
ಆಗ ಬ್ರಟಿಷರು ಹಿಂದುಗಳ ಪರ ವಹಿಸಿ ಅವರನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟುತ್ತಿದ್ದರು,ನಂತರ ಹಿಂದುಗಳೂ ಬ್ರಿಟಿಷರ ವಿರುದ್ದ ತಿರುಗಿ ಬಿದ್ದಾಗ ಮುಸ್ಲಿಮರನ್ನು ಓಲೈಸಲು ಪ್ರಯತ್ನಿಸಿ ಹಿಂದೂ ಮುಸ್ಲಿಂ ಎಂಬ ಭೇದ ಭಾವವನ್ನು ಹುಟ್ಟುಹಾಕಿದ್ದರು.
ಈಗಿನ ಸ್ವಾರ್ಥ ರಾಜಕಾರಣಿಗಳು ಅದನ್ನೇ ಮುಂದುವರೆಸುತ್ತಿದ್ದಾರೆ.
ಪೂರ್ವ ಕಾಲದಿಂದಲೇ ಇಲ್ಲಿ ಕೊಲೆ, ಗಲಾಟೆ, ದೊಂಬಿ ಮಾಡುವ ಸಮಸ್ಯೆಗಳು ಇದ್ದವು.
ಆದ್ರೆ ಅದಕ್ಕೊಂದು ವ್ಯವಸ್ಥಿತ ರೀತಿ ಮತ್ತು ಥಿಯರಿ ಬಂದಿದ್ದು ಇತ್ತೀಚಿನ ವರ್ಷಗಳಿಂದ.
ಕೊಲೆ ನಡೆಸಲು ಪ್ರಚೋದನೆ ನೀಡುವ ಸಂಘಗಳಿಂದ ಯುವಕರು ದೂರ ನಿಲ್ಲುವುದೇ ಇದಕ್ಕಿರುವ ಏಕೈಕ ಪರಿಹಾರ.
ನಾವು ಯಾವುದೇ ಪಕ್ಷಗಳ ,ವ್ಯಕ್ತಿಗಳ ಗುಲಾಮರಾಗದೇ ಸ್ವತಂತ್ರವಾಗಿ ಚಿಂತಿಸುವವರಾದರೆ ಆಗಲೇ ಸ್ವಾತಂತ್ರ್ಯಕ್ಕೆ ಅರ್ಥ ಬರುವುದು ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ ಉಸ್ತಾದ್ ಎಸ್ ಬಿ ದಾರಿಮಿ ಮಾತನಾಡಿ ಹಿಂದುಗಳು ಯಾವತ್ತೂ ಮುಸ್ಲಿಮರ ಶತ್ರುಗಳಲ್ಲ.
ಮುಸ್ಲಿಮರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುವ ಎಲ್ಲಾ ಜಾತಿ ಜನಾಂಗದವರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಿ ಅವರಿಗೆ ಒಳಿತನ್ನು ಮಾಡ ಬೇಕೆಂದು ಕುರಾನಿನ ಆದೇಶ ಇದೆ.
ಪ್ರವಾದಿಯವರ ಕಾಲದಲ್ಲಿ ಅವರನ್ನು ಊರಿಂದ ಪಲಾಯನ ಮಾಡಿಸಿ ನಂತರ ಯುದ್ದಕ್ಕೆ ಹೊರಟವರೊಂದಿಗೆ ನೀವೂ ಯುದ್ದ ಮಾಡಿ ಎಂಬ ಕುರಾನಿನ ವಚನಗಳು, ಮುಸ್ಲಿಮರೊಂದಿಗೆ ಅನ್ಯೋನ್ಯತೆಯಲ್ಲಿ ಇರುವ ಮತ್ತು ಇಸ್ಲಾಂ ಧರ್ಮಕ್ಕೆ ನೆಲೆಯೊದಗಿಸಿದ ಭಾರತೀಯ ಹಿಂದುಗಳಿಗೆ ಅನ್ವಯ ಆಗುವುದಿಲ್ಲ.
ಬ್ರಿಟಿಷರು ಕುತಂತ್ರದ ಮೂಲಕ ಹಿಂದೂ ಮುಸ್ಲಿಮರನ್ನು ಒಡೆದು ಹಾಕಲು ಷಡ್ಯಂತ್ರ ರೂಪಿಸಿದರು.
ಬ್ರಿಟಿಷರು ದೇಶವನ್ನು ಕೊಳ್ಳೆ ಹೊಡೆದು ತಮ್ಮ ದೇಶಕ್ಕೆ ಕೊಂಡೊಯ್ದು ಕೊನೆಗೆ ದೇಶವನ್ನು ಬರಡಾಗಿಸಿ ಊರಿಗೆ ಮರಳಿದ್ದರೆ ಮುಸ್ಲಿಂ ಆಡಳಿತಗಾರರರು ಭಾರತಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿ ಇಲ್ಲಿಯೇ ಮಣ್ಣಲ್ಲಿ ಮಣ್ಣಾಗಿ ಹೋದರು ಎಂದ ಅವರು,
ಮಾನವನು ಇರುವ ಎಲ್ಲಾ ಕಡೆಯೂ ಸಮಸ್ಯೆಗಳು- ಮನಸ್ತಾಪಗಳು ಇರುತ್ತವೆ.
ಒಂದು ಮನೆಯ ಒಳಗೇ ಗಲಾಟೆ ನಡೆಯತ್ತದೆ.
ಸಂಸ್ಥೆಗಳ ಸಿಬ್ಬಂದಿಗಳ ನಡುವೇಯೂ ಸರಿ ಇರುವುದಿಲ್ಲ.ಅಂತದರಲ್ಲಿ ಜಗತ್ತಿನ ಅತೀ ಹೆಚ್ಚು ಜನ ಸಂಖ್ಯೆ ಇರುವ ಮತ್ತು ಜಾತಿ,ಧರ್ಮ,ಪಕ್ಷ ,ಪಂಗಡಗಳು ನೂರಾರು ಇರುವ ಒಂದು ದೇಶದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಸಹಜವಾಗಿದೆ.
ಸ್ಥಳೀಯವಾಗಿ ಏನಾದರೂ ಅಂತಹ ದುರ್ಘಟನೆಗಳು ನಡೆದಲ್ಲಿ ಮಾತುಕತೆ ನಡೆಸಿ ಅಲ್ಲಿಗೆ ಅದನ್ನ ಮುಕ್ತಾಯ ಗೊಳಿಸಲು ನಾಡಿನ ಮುಖಂಡರು ಪ್ರಯತ್ನಿಸ ಬೇಕಾಗಿದೆ.
ಅಂದ ಹಾಗೆ ಇದು ನಾಗರಿಕತೆಯಯುಗ.
ಕತ್ತಿ ,ಕಾಳಗ ,ಯುದ್ದ ನಡೆಸ ಬೇಕಾದ ಕಾಲ ಇದಲ್ಲ.
ಇಂದು ಶಿಕ್ಷಣ ಪಡೆದು ಮೇಲೆ ಬರುವುದೇ ಹೋರಾಟವಾಗಿದೆ.
ಪ್ರವಾದಿಗಳ ಕಾಲದಲ್ಲಿ ಎರಡು ಕುದುರೆಗಳನ್ನು ಸಾಕಿ ಸಲಹಿದರೆ ಸ್ವರ್ಗ ಇದೆ ಎಂದಿದ್ದರು.ಆದ್ರೆ ಇಂದು ಕುದುರೆ ಬೆಳೆಸುವ ಕಾಲವಲ್ಲ.
ಆದ್ದರಿಂದ ಎರಡು ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ನೀಡಿದರೆ ಸ್ವರ್ಗ ಪ್ರಾಪ್ತಿಯಾಗ ಬಹುದು ಎಂದು ಅಭಿಪ್ರಾಯ ಪಟ್ಟರು.
ದಾರುನ್ನೂರು ಪ್ರಾನ್ಸುಪಾಲರಾದ ಅಮೀನ್ ಹುದವಿ ,
ಸ್ಥಳೀಯ ಪಂಚಾಯಿತಿ ಉಪಾದ್ಯಕ್ಷ ಸತೀಷ್ ಬಂಗೇರ,ತೋಡಾರು ಹಾಜಿ ಉಸ್ಮಾನ್ ಏರ್ ಇಂಡಿಯಾ ಮೊದಲಾದವರು ಮಾತನಾಡಿದರು
ದಾರುನ್ನೂರು ವಿದ್ಯಾರ್ಥಿ ಹರ್ಷದ್ ಮಾರಿಪಲ್ಲ ಕಿರಾಹತ್ ಪಠಿಸಿದರು.
SKSSF ಮೂಡಬಿದ್ರೆ ಕಾರ್ಯದರ್ಶಿ ಪಾರೂಕ್ ಸ್ವಾಗತಿಸಿದರು.
ಅಶ್ರಫ್ ಮರೋಡಿ ಅಧ್ಯಕ್ಷತೆ ವಹಿಸಿದರು.
ಫಕಿರಬ್ಬ ಮಾಸ್ಟರ್
ಉಪಾಧ್ಯಕ್ಷ ರು ಜಿಲ್ಲಾ ವಕ್ಫ್ ಸಲಹಾ ಸಮಿತಿ ,
ಮಾಲಿಕ್ ಅಝೀಝ್ ಎಸ್ಕೆ ಎಸ್ಸೆಸ್ಸೆಪ್ ದ.ಕ,
ಅಹ್ಮದ್ ಹುಸೈನ್
ಅದ್ಯಕ್ಷರು ಮದ್ರಸ ಮೆನೇಜ್ಮೆಮೆಂಟ್ ಮೂಡಬಿದ್ರೆ
ಮೂಡಬಿದ್ರೆ ವಲಯ ಪಧಾದಿಕಾರಿಗಳಾದ
ಅಬ್ದುಲ್ ರಹ್ಮಾನ್ ,
ತಸ್ಲೀಮ್ ಆರಿಸ್,
ಬದ್ರುಲ್ ಮುನೀರ್, ಹಾಗೂ ಮುಹೀನ್ ಹುದವಿ ದಾರುನ್ನೂರು,
ಅಬುಬಕ್ಕರ್ ಸಿದ್ದೀಕ್ ದಾರಿಮಿ ಮೂಡಬಿದ್ರೆ ಟೌನ್ ಮಸೀದಿ ಖತೀಬರು,
ಮುಹಮ್ಮದ್ ಫಾಯಿಝ್ ಫೈಝಿ
ಖತೀಬರು ಲಾಡಿ ಮಸೀದಿ,
ಅಬ್ದುಲ್ಲಾ ರಹ್ಮಾನಿ ಬಾಂಬಿಲ
ಖತೀಬರು ತೋಡಾರು,
ಅಬ್ಬಾಸ್ ಪೈಝಿ ಖತೀಬರು ಕಾಶಿಪಟ್ಣ,
ಬಶೀರ್ ವಹಬಿ,
ಮಯ್ಯದ್ದಿ ಗುಂಡು ಕಲ್ಲು ಮೊದಲಾದವರು ಭಾಗವಹಿಸಿದ್ದರು.
ವಿಖಾಯ ತಂಡದವರು ಎಲ್ಲಾ ರೀತಿಯ ಸಹಕಾರ ನೀಡಿದರು.
Tags:
SKSSF NEWS