ನಿನ್ನೆ ರಾತ್ರಿ ಎನ್ ಡಿಟಿವಿ ನೋಡ್ತಾ ಇದ್ದೆ. ಗುಜರಾತಿನ ಬಿಜೆಪಿ ಶಾಸಕರು ಲೈನಲ್ಲಿದ್ರು. ಬಿಲ್ಕಿಸ್ ಬಾನು ಅತ್ಯಾಚಾರಿ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವುದರ ಬಗ್ಗೆ ಮತ್ತು ಅವರಿಗೆ ಸಿಹಿತಿನಿಸು ತಿನ್ನಿಸಿ

ನಿನ್ನೆ ರಾತ್ರಿ ಎನ್ ಡಿಟಿವಿ ನೋಡ್ತಾ ಇದ್ದೆ. ಗುಜರಾತಿನ ಬಿಜೆಪಿ ಶಾಸಕರು ಲೈನಲ್ಲಿದ್ರು. ಬಿಲ್ಕಿಸ್ ಬಾನು ಅತ್ಯಾಚಾರಿ ಅಪರಾಧಿಗಳನ್ನು  ಬಿಡುಗಡೆಗೊಳಿಸಿರುವುದರ ಬಗ್ಗೆ ಮತ್ತು ಅವರಿಗೆ ಸಿಹಿತಿನಿಸು ತಿನ್ನಿಸಿ, ತಿಲಕ ಇರಿಸಿ  ಸ್ವಾಗತ ಕೋರಿರುವುದರ ಬಗ್ಗೆ ನಿರೂಪಕರು ಪ್ರಶ್ನಿಸಿದ್ರು. ಆದರೆ ಅವರು ಗೋದ್ರಾ ರೈಲು ದಹನದಿಂದ ಆಚೆಗೆ ಬರ್ತಾನೇ ಇರ್ಲಿಲ್ಲ. ನಿರೂಪಕರು ಪದೇಪದೇ ವಿಷಯಕ್ಕೆ ಬನ್ನಿ ಎಂದು ಕೇಳಿಕೊಂಡರೂ ಅವರದ್ದು ಅದೇ ರಾಗ ಅದೇಹಾಡು. ಕೊನೆಗೆ, ನಾನು ಆ ಸ್ವಾಗತವನ್ನು ಸಮರ್ಥಿಸುವುದಿಲ್ಲ.. ಎಂದು ಒಂದು ವಾಕ್ಯ ಹೇಳಿ ಮುಗಿಸಿದರು. 

20-08-2022
ನಿಜವಾದ ಸಮಸ್ಯೆ ಇದು. ಸಂತ್ರಸ್ತರು ಮುಸ್ಲಿಮರು ಎಂದು ಗೊತ್ತಾದ ಕೂಡಲೇ ಅವರ ಮೇಲೆ ನಡೆದ ಹೀನಾತಿಹೀನ ಕ್ರೌರ್ಯವನ್ನು ಮತ್ತು ಆ ಕ್ರೌರ್ಯವೆಸಗಿದ ಕ್ರೂರಿಗಳನ್ನು ಸಮರ್ಥಿಸೋದು, ಮುಸ್ಲಿಮರು ಎಂಬ ಏಕೈಕ ಕಾರಣಕ್ಕಾಗಿ ಅವರನ್ನು ಥಳಿಸುವ, ಹೀಯಾಳಿಸುವ ಮತ್ತು ತಾರತಮ್ಯ ಎಸಗುವ ಕೃತ್ಯಗಳನ್ನು ಸಂಭ್ರಮಿಸೋದು ಅಂತಿಮವಾಗಿ ಆ ಸಂತ್ರಸ್ತರಿಗಿಂತ ಹೆಚ್ಚು ಹೀಯಾಳಿಸಿದವರ ಧರ್ಮದ ಘನತೆಗೇ ಪೆಟ್ಟು ಕೊಡುತ್ತೆ. ಅದು ಹೇಗೆಂದರೆ, ಆ ಗುಜರಾತ್ ಶಾಸಕ ಎದುರಿಸಿದ ಮುಜುಗರದ ಹಾಗೆ. ಸಮರ್ಥಕರಿಗೆ ಆ ಕ್ಷಣದಲ್ಲಿ ಅದು ಕ್ಷಣಿಕ ಸುಖವನ್ನೋ ಆವೇಶವನ್ನೋ ಕೊಡಬಹುದು. ಆದರೆ ದೂರಗಾಮಿ ಪರಿಣಾಮದ ದೃಷ್ಟಿಯಿಂದ ನೋಡಿದರೆ ಅದರಿಂದ ಧರ್ಮದ ವರ್ಚಸ್ಸಿಗೆ ಹಾನಿಯಾಗಬಹುದೇ ಹೊರತು ಅದರೆಡೆಗೆ ಆಕರ್ಷಣೆಯಲ್ಲ. ಅಫಘಾನಿಸ್ತಾನದಿಂದ ಹೊರ ಬರುವ ಪ್ರತಿ ಕರ್ಮಠ ಸುದ್ದಿಗಳು ಹೇಗೆ ಮುಸ್ಲಿಮರಲ್ಲಿ ಮುಜುಗರವನ್ನು ತರಿಸುತ್ತೋ ಅದೇ ರೀತಿಯ ಮುಜುಗರದ ಸ್ಥಿತಿ ಮುಂದೊಂದು ದಿನ ಇಲ್ಲೂ ನಿರ್ಮಾಣವಾಗಬಹುದು.


ಧರ್ಮ ಒಪ್ಪದ ಕೃತ್ಯಗಳನ್ನು ಧರ್ಮದ ನೆಲೆಯಲ್ಲಿ ಸಮರ್ಥಿಸುವುದರಿಂದ ಧರ್ಮಕ್ಕೆ ಹಾನಿಯೇ ಹೊರತು ಇನ್ನಾರಿಗೂ ಅಲ್ಲ. ಇಂಥ ಸಮರ್ಥನೆಗಳಿಗೆ ರಾಜಕೀಯ ಕಾರಣ ಇರಬಹುದು. ಆದರೆ ಇಂಥವುಗಳಿಂದ ಜನರು ಬೇಸತ್ತಿದ್ದಾರೆ ಎಂದು ಸ್ಪಷ್ಟವಾದ ಕೂಡಲೇ ರಾಜಕೀಯ ಪಕ್ಷಗಳು ಅವುಗಳಿಂದ ಕಳಚಿಕೊಳ್ಳಬಹುದು. ಹಾಗೆಯೇ, ಅದರ ನಾಯಕರು ಬದಲಾಗಬಹುದು ಅಥವಾ ಕಾಲದೊಂದಿಗೆ ಲೀನವಾಗಿ ಅವರು ಕಳೆದುಹೋಗಬಹುದು ಅಥವಾ ಹೊಸಬರು ಆ ಜಾಗವನ್ನು ಆಕ್ರಮಿಸಿಕೊಳ್ಳಬಹುದು. ಆದರೆ ಧರ್ಮ ಹಾಗಲ್ಲವಲ್ಲ. ಅಂಟಿದ ಕಳಂಕದಿಂದ ಕಳಚಿಕೊಳ್ಳುವುದು ಧರ್ಮದ ಪಾಲಿಗೆ ಸುಲಭ ಅಲ್ಲ. ಐಸಿಸ್, ಲಷ್ಕರ್-ಎ-ತೊಯ್ಬಾ, ಇಂಡಿಯನ್ ಮುಜಾಹಿದೀನ್ ಇತ್ಯಾದಿಗಳನ್ನು ಮುಸ್ಲಿಮರು ಸಮರ್ಥಿಸದೇ ಇದ್ದರೂ ಒಂದು ಹಂತದವರೆಗೆ ಅದು ಇಸ್ಲಾಮಿನ ವರ್ಚಸ್ಸಿಗೆ ಮತ್ತು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಕಾರಣವಾಗಿರುವುದಂತೂ ಸತ್ಯ. ಏನೇ ಆಗಲಿ, 

ಅನ್ಯಾಯ ಅನ್ಯಾಯವೇ. ಅದನ್ನು ಖಂಡಿಸಲು ಅನ್ಯಾಯಕ್ಕೆ ಒಳಗಾದವರ ಧರ್ಮ ಮತ್ತು ಅನ್ಯಾಯ ಎಸಗಿದವರ ಧರ್ಮ ಆಧಾರವಾಗಬಾರದು. ಧರ್ಮ ನೋಡಿ ನ್ಯಾಯ ಅನ್ಯಾಯವನ್ನು ನಿರ್ಧರಿಸುವುದರಿಂದ ಧರ್ಮಕ್ಕೆ ಆಗುವಷ್ಟು ಹಾನಿ ಸಂತ್ರಸ್ತರಿಗೂ ಆಗುವುದಿಲ್ಲ. ಇದರ ಅರಿವಾಗುವುದು ನಿಧಾನಕ್ಕೆ.

ಏ ಕೆ ಕುಕ್ಕಿಲ



🟥🟥🟥🟥🟥🟥🟥🟥🟥🟥🟥🟥🟥🟥🟥🟥🟥🟥🟥🟥

Thanks for visiting our website
This website name hot news ahs
Created by Ali hasan savanoor
We provide latest news and job vacancies in INDIA , DUBAI , USA , and Other country 
You can also send news and job vacancies available
Contact on what's app link given below 
Gmail account : mh3087866@gmail.com 
Join What's App group click here
Our website language in Kannada , malayalam , English 
And updates given by this tech news , news , job vacancies available , and others etc......

Once again thanks keep supporting

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು