ಉಲಮಾಗಳಿಂದ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ಶ್ಲಾಘನೀಯ
ಚಿಂತಕ ಅರವಿಂದ ಚೊಕ್ಕಾಡಿ
ಮಾಣಿ;
ಧಾರ್ಮಿಕ ಆಚಾರ ವಿಚಾರಗಳಿಗೆ ನೇತೃತ್ವ ನೀಡುವುದರ ಜೊತೆಯಲ್ಲಿ ಬೇರೆ ಜಾತಿಗಳ ಧರ್ಮಗುರುಗಳಿಗಿಂತ ಭಿನ್ನವಾಗಿ ಮುಸ್ಲಿಂ ಧರ್ಮ ಗುರುಗಳು ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡಲು ಮುಂದಡಿ ಇಟ್ಟದ್ದು ಉತ್ತಮ ಬೆಳವಣಿಗೆಯಾಗಿದೆ.
ಮುಂದಿನ ದಿನಗಳಲ್ಲಿ ಮಸೀದಿ ಜಮಾತ್ ಮೂಲಕ ಕನ್ನಡ ಓದುಗರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಹಿತ್ಯ ಕೃತಿಗಳನ್ನು ಸಾರ್ವಜನಿಕರಿಗೆ ಹೆಚ್ಚು ಹೆಚ್ಚು ಪರಿಚಯಿಸಿ ಕೊಟ್ಟರೆ ಅದರಿಂದ ಸಮಾಜದಲ್ಲಿ ಬಹಳಷ್ಟು ಧನಾತ್ಮಕ ಬದಲಾವಣೆಗಳು ಉಂಟಾಗಿ ಸಮಾಜವು ಅಭಿವೃದ್ದಿ ಪಥದಲ್ಲಿ ಸಾಗಲು ಅನುಕೂಲವಾಗುತ್ತದೆ ಎಂದು ಖ್ಯಾತ ಚಿಂತಕ ಅರವಿಂದ ಚೊಕ್ಕಾಡಿ ಅಭಿಪ್ರಾಯ ಪಟ್ಟಿದ್ದಾರೆ.
ಕುಂಬಳೆ ಇಮಾಂ ಶಾಫಿ ಅಕಾಡೆಮಿ ಸ್ಥಾಪಕ ಶೈಖುನಾ ಖಾಸಿಂ ಉಸ್ತಾದರ ಕನ್ನಡಿಗ ಶಿಷ್ಯ ಬಳಗ "ರೌಳತುಲ್ ಉಲಮಾ" ಆಯೋಜಿಸಿದ್ದ 'ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಲ್ಪ ಸಂಖ್ಯಾತರ ಸ್ಥಿತಿಗತಿ" ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಇಲ್ಲಿನ "ಸಮಸ್ತ ಮಹಲ್" ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ "ಮುಸ್ಲಿಮರು ಮತ್ತು ಕನ್ನಡ ಸಾಹಿತ್ಯ" ಬಗ್ಗೆ ವಿಚಾರ ಮಂಡಿಸಿ ಚೊಕ್ಕಾಡಿಯವರು ಮಾತನಾಡಿದರು.
ಕನ್ನಡದಲ್ಲಿ ಸೇವೆ ಮಾಡಿದ ಹಲವಾರು ಸಾಹಿತಿಗಳನ್ನು ಸ್ಮರಿಸಿದ ಅವರು ತೊಂಬತ್ತರ ದಶಕದ ನಂತರ ದೇಶದ ಕೋಮು ಆಧಾರಿತ ಧ್ರುವೀಕರಣ ದಿಂದಾಗಿ ಮುಸ್ಲಿಮ್ ಸಾಹಿತಿಗಳೂ ಬಹಳ ಇಕ್ಕಟ್ಟಿನಲ್ಲಿ ಸಿಲುಕಿದ ಪರಿಸ್ಥಿತಿ ಉಂಟಾಗಿದೆ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಝುನೈಪ್ ಕೋಲ್ಪೆ,ಬಿ ಎಂ ರಮೀಝ,ಹಾರಿಸ್ ಬಾಂಬಿಲ ಇವರಿಗೆ ಸಮಸ್ತ ಮುಶಾವರ ಸದಸ್ಯ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಪ್ರಶಸ್ತಿ ಪ್ರದಾನ ಮಾಡಿದರು.
ಎಂ ಪಿ ಮುಹಮ್ಮದ್ ಸಹದಿ ಉದ್ಘಾಟಿಸಿದರು.
ಎಸ್ ಬಿ ಮುಹಮ್ಮದ್ ದಾರಿಮಿ ಅದ್ಯಕ್ಷತೆ ವಹಿಸಿದರು.
ಶೇಖ್ ಮುಹಮ್ಮದ್ ಇರ್ಪಾನಿ,ಅಲಿ ದಾರಿಮಿ ಕಿನ್ಯ,ಮೂಸಾ ನಿಝಾಮಿ,ಅಯೂಬ್ ಮುಸ್ಲಿಯಾರ್ ನೆಲ್ಯಾಡಿ ಮೊದಲಾದವರು ಮಾತನಾಡಿದರು.
ಅಬ್ದುಲ್ ಅಝೀಝ್ ದಾರಿಮಿ ಕೊಡಾಜೆ, ಉಮರ್ ದಾರಿಮಿ ಆತೂರು,ಮಜೀದ್ ದಾರಿಮಿ ಏನಾಜೆ,ಅಶ್ರಪ್ ಹನೀಪಿ ಉಪ್ಪಿನಂಡಿ,ಹಮೀದ್ ದಾರಿಮಿ ಗೋಲ್ತಮಜಲ್, ಜಬ್ಬಾರ್ ಅರ್ಶದಿ ಮಿತ್ತೂರು,
ಹಮೀದ್ ಹಾಜಿ ಸಾಲ್ಮರ,ಶೌಕತ್ ಪೈಝಿ ಕನ್ಯಾನ ,ರಝಾಕ್ ದಾರಿಮಿ ಕೆಮ್ಮಾರ ಮೊದಲಾದವರು ಉಪಸ್ಥಿತರಿದ್ದರು.
ಕೆ ಎಲ್ ದಾರಿಮಿ ಪ್ರಸ್ತಾವನೆ ಗೈದರು.
ಮಜೀದ್ ದಾರಿಮಿ ಮಿತ್ತೂರು ಸ್ವಾಗತಿಸಿದರು..
ನಿಝಾಮಿ ಮಜೀದ್ ವಂದಿಸಿದರು.
ಖಾಸಿಂ ಉಸ್ತಾದ್ ಮತ್ತು
ಮರ್ಹೂಂ ಕನ್ಯಾನ ಸುಲೈಮಾನ್ ಪೈಝಿ ಉಸ್ತಾದರ ಹೆಸರಲ್ಲಿ ತಹ್ಲೀಲ್ ಸಮರ್ಪಣೆ ನಡೆಯಿತು.
Tags:
News