ಹೌದು
ಒಂದು ಕಾಲದಲ್ಲಿ ಇಲ್ಲಿನ ಮುಸ್ಲಿಮರು ರಾಜ್ಯ ಭಾಷೆ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡುವುದನ್ನು ಏನೋ ಒಂಥರ ಕೀಳು ಭಾವನೆಯಿಂದ ನೋಡುತ್ತಿದ್ದರು.
ಈಗಲೂ ಕೆಲವೊಂದು ಕಡೆ ಮುಸ್ಲಿಮರು ಉರ್ದುವನ್ನೇ ನೆಚ್ಚಿಕೊಂಡು ಕನ್ನಡವನ್ನು ತಿರಸ್ಕಾರ ಮನೋಭಾವದಿಂದ ಕಾಣುವವರೂ ಇದ್ದಾರೆ.
ನಿಜವಾಗಿಯೂ ಇದು ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ದೂರ ಉಳಿಸಿ ಅವರ ಏಳಿಗೆಯನ್ನು ತಡೆಯುವುದಕ್ಕೆ ಮಾತ್ರ ಕಾರಣವಾಗುತ್ತದೆ.
ಇತ್ತೀಚಿನ ವರ್ಷಗಳಿಂದ ಕರಾವಳಿಯ ಮುಸ್ಲಿಮರಲ್ಲಿ ಅನೇಕ ಪ್ರತಿಭಾವಂತರು ಕನ್ನಡದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದು ಉತ್ತಮ ಬೆಳವಣಿಗೆಯಾಗಿದೆ.
ಸಲೀಸಾಗಿ ಕನ್ನಡ ಭಾಷಣ ಮಾಡುವ ,ಬರೆಯುವ ಹಲವಾರು ಪ್ರತಿಭಾಶಾಲಿಗಳು ನಮ್ಮಲ್ಲಿ ಸೃಷ್ಟಿಯಾಗಿದ್ದಾರೆ.
ಇತ್ತೀಚೆಗೆ ಮರ್ಹೂಂ ಖಾಸಿಂ ಉಸ್ತಾದರ ಶಿಷ್ಯಂದಿರ ಕರ್ನಾಟಕ ರೌಳತುಲ್ ಉಲಮಾ ಎಂಬ ಸಂಘಟನೆ ಪ್ರಬಂಧ ಸ್ಪರ್ದೆ ಏರ್ಪಡಿಸಿದಾಗ ಹಲವಾರು ಉದಯೋನ್ಮುಖ ಬರಹಗಾರರು ಕಳುಹಿಸಿ ಕೊಟ್ಟ ಲೇಖನಗಳು ಒಂದಕ್ಕೊಂದು ಉತ್ತಮ ರೀತಿಯಲ್ಲಿತ್ತು.
ಮೌಲ್ಯ ಮಾಪಕರಿಗೂ ಅವುಗಳಿಂದ ಯಾವುದನ್ನು ಆರಿಸ ಬೇಕೆಂಬುದರ ಬಗ್ಗೆ ಗೊಂದಲ ಉಂಟಾಗಿತ್ತು.
ಆದರೆ ಎಲ್ಲವನ್ನೂ ಅಳೆದು ತೂಗಿ ಇದೀಗ ಅವಾರ್ಡ್ ಘೋಷಣೆ ಮಾಡಲಾಗಿದೆ.
ಈ ಅವಾರ್ಡ್ ಪ್ರಧಾನ ಕಾರ್ಯಕ್ರಮವನ್ನು ವರೈಟಿಯಾಗಿ ಸಂಘಟಕರು ಆಯೋಜಿಸಿದ್ದು ಇದೇ ಆಗಸ್ಟ್ 27 ಶನಿವಾರ ಮಾಣಿ ನೇರಳಕಟ್ಟೆ ಸಮಸ್ತ ಮಹಲ್ ನಲ್ಲಿ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ತನ್ನ ಪ್ರಖರ ಚಿಂತನೆಗಳಿಂದ ಕನ್ನಡ ಸಾರಸ್ವತ ಲೋಕದಲ್ಲಿ ಬಾರೀ ಸುದ್ದಿಯಲ್ಲಿರುವ ಅರವಿಂದ ಚೊಕ್ಕಾಡಿ ಸರ್ ಅವರಿಂದ ಕನ್ನಡ ಸಾಹಿತ್ಯ ಮತ್ತು ಮುಸ್ಲಿಮರು ಎಂಬ ವಿಚಾರದಲ್ಲಿ ವಿಷಯ ಮಂಡನೆ ನಡೆಯಲಿದೆ.
ಮಧ್ಯಾಹ್ನ ಎರಡು ಘಂಟೆಯಿಂದ ನಾಲ್ಕರ ತನಕ ಈ ಕಾರ್ಯಕ್ರಮ ನಡೆಯಲಿದೆ.
ಕನ್ನಡದ ಬಗ್ಗೆಗಿನ ನಮ್ಮ ಕಾಳಜಿಯನ್ನು ಇನ್ನಷ್ಟು ಉದ್ದೀಪನ ಗೊಳಿಸುವ ನಿಟ್ಟಿನಲ್ಲಿ ಕನ್ನಡದೊಂದಿಗೆ ಸಂಪರ್ಕ ಇರುವ ಬುದ್ದಿ ವಂತರಿಗೆ ಇದೊಂದು ಸುವರ್ಣವಕಾಶ.
ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಿರುವ ಈ ವಿಚಾರ ಗೋಷ್ಟಿ ಉಲಮಾಗಳೇ ಮುಂದೆ ಬಂದು ನಡೆಸುತ್ತಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಸಾಧ್ಯವಾದಷ್ಟು ಉಲಮಾಗಳು ಮತ್ತು ಇತರ ಉದಯೋನ್ಮುಖ ಬರಗಾರರು ಪಕ್ಷ ಬೇದವಿಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ.ಇದರ ಯಶಸ್ಸಿನಿಂದ ಒಂದು ಸಮಾಜವನ್ನು ಇನ್ನಷ್ಟು ಯಶಸ್ಸಿನತ್ತ ಕೊಂಡೊಯ್ಯಲು ಸಾದ್ಯವಾಗುತ್ತೆ.
ಎಲ್ಲರೂ ಭಾಗವಹಿಸಿ ವಿನೂತನ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿ.
Tags:
News