ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರರ ನಿಲುವಿಗೆ ರಾಜ್ಯದ ಶಾಂತಿಪ್ರಿಯ ಜನತೆಯ ಆಶೀರ್ವಾದ ಖಂಡಿತ ಇದೆ.
-ಎಸ್ ಬಿ ದಾರಿಮಿ
ನಿಜವಾಗಿಯೂ ಈ ದೇಶದಲ್ಲಿ ಅಶಾಂತಿ ಹರಡೋರು ಯಾರು ಎಂಬುದು ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ರುಜುವಾತು ಗೊಂಡಿದೆ.
ಪ್ರಾಯಕ್ಕೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಯ ಆವರಣದೊಳಗೆ ತಲೆಮುಚ್ಚುವ ವಿವಾದ ತಾರಕಕ್ಕೇರಿ ನ್ಯಾಯಾಲಯದ ತೀರ್ಪು ಬಂದಾಯಿತು.
ಧಾರ್ಮಿಕ ಸೂಕ್ಷ್ಮ ವಿಚಾರದಲ್ಲಿ ತೀರ್ಪು ನೀಡುವಾಗ ಆಯಾ ಧರ್ಮೀಯರ ಮನಸ್ಸಿಗೆ ಘಾಸಿಯಾಗದ ರೀತಿಯಲ್ಲಿ ನೀಡ ಬೇಕಾದ ತೀರ್ಪು ಗೊಂದಲಕಾರಿಯಾಗಿ ಹೊರ ಬಿದ್ದಾಗ ಸಹಜವಾಗಿಯೇ ಆಯಾ ಧರ್ಮೀಯ ವಿಶ್ವಾಸಿಗರಿಗೆ ಅಸಮಾಧಾನ ಇದ್ದೇ ಇರುತ್ತೆ.
ಈ ಬೇಗುದಿಯನ್ನು ಶಾಂತಿಯುತ ರೀತಿಯಲ್ಲಿ ಪ್ರದರ್ಶಿಸಲು ಪ್ರಜೆಗಳಿಗೆ ಅವಕಾಶವೂ ಇದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಭಂದಿಸಿದಂತೆ ಬಂದ ತೀರ್ಪಿನ ನಂತರ ಆ ರಾಜ್ಯದಲ್ಲಿ ಉಂಟಾದ ಅನಾಹುತ ಏನೆಂಬುದು ಎಲ್ಲರಿಗೂ ಗೊತ್ತು.
ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲಿಂದ ಮೇಲೆ ಹರತಾಳ ಆಚರಿಸಿ ಕೋಟ್ಯಾಂತರ ಬೆಲೆಬಾಳುವ ಸಾರ್ವಜನಿಕ ಸೊತ್ತು ನಾಶ ಮಾಡಿದ್ದೇ ಅಲ್ಲದೇ ಕೋರ್ಟನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಏನೇನೋ ಹೇಳಿಕೆಗಳನ್ನು ನೀಡಿದ್ದು ಇನ್ನೂ ಯಾರೂ ಮೆರೆತಿಲ್ಲ.
ಆದರೆ ಮೊನ್ನೆ ಕರ್ನಾಟಕ ರಾಜ್ಯದ ಮುಸ್ಲಿಮರು ಸ್ವಯಂ ಪ್ರೇರಿತ ಬಂದ್ ಆಚರಿಸಿದಾಗ ಒಂದು ರೂಪಾಯಿಯ ಸೊತ್ತು ಕೂಡಾ ನಾಶ ಉಂಟಾಗಲಿಲ್ಲ.
(ಬಂದ್ ನ ಅಗತ್ಯ ಇತ್ತೋ ಇಲ್ಲದಿತ್ತೋ ಎಂಬುದು ಬೇರೆ ವಿಚಾರ)
ಆದರೆ ಇದನ್ನೇ ಮುಂದಿಟ್ಟು ಕೆಲವು ಹಿಂದುತ್ವ ವಾದಿಗಳು ಮತ್ತೆ ಮುಸ್ಲಿಮ್ ವ್ಯಾಪಾರಿಗಳ ವಿರುದ್ದ ಬಹಿಷ್ಕಾರವನ್ನು ಹೇರುವ ಮೂಲಕ ಹಿಂದೂ -ಮುಸ್ಲಿಂ ಧ್ರುವೀಕರಣ ಕ್ಕೆ ಮತ್ತಷ್ಟು ಪ್ರಚೋದನೆ ನೀಡುತ್ತಿರುವುದು ಕಂಡು ಬರುತ್ತಿದೆ.
ನಿಜವಾಗಿಯೂ ಮುಸ್ಲಿಂ ಮಹಿಳೆಯರ ಈ ತಲೆ ವಸ್ತ್ರ ಎಂಬುದು ಹಿಂದು ಮುಸ್ಲಿಂ ಸಮಸ್ಯೆಯೇ ಅಲ್ಲ.
ಆರೆಸ್ಸೆಸ್ ಕಾರ್ಯಕರ್ತರಿಂದ ಹಿಡಿದು ಹಿಂದೂ ಸ್ವಾಮೀಜಿಗಳ ತನಕ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಾಂಪ್ರದಾಯಿಕವಾಗಿಯೇ ತಲೆ ಮುಚ್ಚಿಕೊಳ್ಳುತ್ತಿದ್ದಾರೆ.
ಅಲ್ಲಿ ಎಲ್ಲೂ ಇಲ್ಲದ ಸಮಸ್ಯೆ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸಮ ವಸ್ತ್ರದ ಸೆರಗಿನಿಂದ ಕೊಂಚ ತಲೆ ಮುಚ್ಚಿಕೊಂಡರೆ ಹೇಗೆ ಉಂಟಾಗುತ್ತದೆ ಎಂಬುದನ್ನು ನ್ಯಾಯಾಲಯವೇ ಹೇಳ ಬೇಕಾಗುತ್ತದೆ.
ಒಟ್ಟಾರೆ ದೇಶದ ಪ್ರತಿಯೊಬ್ಬ ಮುಸಲ್ಮಾನ ಈ ದೇಶದಲ್ಲಿ ಶಾಂತಿ ಪ್ರೀತಿ ಬೆಳೆಯ ಬೇಕೆಂದು ಆಶಿಸುತ್ತಾನೆ.
ಅವರ ಯಾವುದೇ ಉರೂಸು ,ಸಭೆ ಸಮಾರಂಭದಲ್ಲಿ ಯಾರಿಗೂ ಬಹಿಷ್ಕಾರವನ್ನು ಹೇರಿದ ಇತಿಹಾಸ ಈ ತನಕ ಉಂಟಾಗಿಲ್ಲ.
ಅದೆಷ್ಟೋ ಮಸೀದಿಗಳ ಕಮರ್ಶೀಯಲ್ ಕಟ್ಟಡಗಳಲ್ಲಿ ಇಂದಿಗೂ ಹಿಂದೂ ಬಾಂದವರು ಬಾಡಿಗೆಗೆ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ.
ಅದೇ ವೇಳೆ ಕೆಲವೊಂದು ಹಿಂದು ಬಾಂದವರು ಅನಾಗರಿಕ ರೀತಿಯಲ್ಲಿ ಅಶಾಂತಿಗೆ ಪ್ರಚೋದನೆ ಕೊಡುವ ರೀತಿಯಲ್ಲಿ ಕೋಮು ದ್ವೇಷ ಹರಡುವ ಏನೇನೋ ಬರಹಗಳನ್ನೂ ಬಹಿಷ್ಕಾರದ ಕರೆಯನ್ನೂ ಕೊಡುತ್ತಿರುವಾಗ ರಾಜ್ಯದ ಕಾನೂನು ಪಾಲಕರು ಮೂಕಪ್ರೇಕ್ಷಕರಾಗಿ ಏನೂ ಆಗದಂತೆ ಮೌನ ವಹಿಸುತ್ತಿರುವು ಅಕ್ಷ್ಯಮ್ಯವಾಗಿದೆ.
ಈ ನಿಟ್ಟಿನಲ್ಲಿ ಮುಲ್ಕಿಯ ಸೌಹಾರ್ಧತೆಯ ತಾಣವೂ ಹಿಂದು ,ಮುಸ್ಲಿಂ ಸಾಮರಸ್ಯದ ಐತಿಹಾಸಿಕ ಹಿನ್ನಲೆ ಇರುವಂತದ್ದೂ ಆದ ಬಪ್ಪನಾಡು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರ ಸಂದರ್ಭೋಚಿತ ನಿಲುವು ಖಂಡಿತ ಈ ದೇಶದ ಉಜ್ವಲ ಭವಿಷ್ಯದಲ್ಲಿ ನಂಬಿಕೆ ಇಟ್ಟವರಿಗೆ ಆಶಾಕಿರಣವಾಗಿ ಗೋಚರಿಸುತ್ತಿದೆ.
ಭಗವಂತನಾದ ದೇವನು ಇಂತಹ ನಾಯಕರಿಗೆ ದೀರ್ಘಾಯುಶ್ಯ ಸಕಲೈಷ್ಯರ್ಯವನ್ನು ಕರುಣಿಸಲಿ.
Tags:
News